ಆಸಿಸ್ನಲ್ಲಿ ಭಾರತದ ವೈವಿಧ್ಯತೆಯ ಸಾಂಸ್ಕೃತಿಕ ಪ್ರದರ್ಶನ: ಒಂಬತ್ತು ವರ್ಷಗಳ ಬಳಿಕ ಕಾಂಗರೂ ನಾಡಿಗೆ ಮೋದಿ ಭೇಟಿ - ETV Bharath Kannada news
🎬 Watch Now: Feature Video
ಸಿಡ್ನಿ (ಆಸ್ಟ್ರೇಲಿಯಾ): ಭಾರತವನ್ನು ವಿವಿಧತೆಯಲ್ಲಿ ಏಕತೆಯ ರಾಷ್ಟ್ರ ಎಂದು ಕರೆಯುತ್ತಾರೆ. ಅದಕ್ಕೆ ತಕ್ಕಂತೆ ಆಸ್ಟ್ರೇಲಿಯಾದ ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿರುವ ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಭಾರತದ ವಿವಿಧ ಪ್ರಕಾರದ ನೃತ್ಯವನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮಕ್ಕೂ ಮುನ್ನ ಆಸಿಸ್ಗೆ ಬಂದಿಳಿದ ಭಾರತದ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಭಾರತದ ಸಂಪ್ರದಾಯದಂತೆ ವೇದ ಮಂತ್ರಗಳಿಂದ ಹಾಗೂ ಅಲ್ಲಿನ ಸ್ಥಳೀಯ ಆಚರಣೆ ಮೂಲಕವೂ ಸ್ವಾಗತಿಸಲಾಯಿತು.
ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿರುವ ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲು ಆಸ್ಟ್ರೇಲಿಯನ್ ಕೌಂಟರ್ ಆಂಟನಿ ಅಲ್ಬನೀಸ್ ಅವರ ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಖುಡೋಸ್ ಬ್ಯಾಂಕ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಭರತನಾಟ್ಯ, ಗರ್ಬಾ, ಕುಚುಪುಡಿ, ಮೋಹಿನಿ ಅಟ್ಟಂ ಹಾಗೇ ಇತ್ತೀಚೆಗೆ ಆಸ್ಕರ್ ವಿಚೇತ ಹಾಡಾದ ನಾಟು ನಾಟುವಿಗೆ ಕೂಡಾ ನೃತ್ಯ ಮಾಡಲಾಯಿತು. ಇದಲ್ಲದೇ ಭಾರತದ ವಿವಿಧ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.
ಒಂಬತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅವರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಕೊನೆಯ ಬಾರಿಗೆ 2014 ರಲ್ಲಿ ದೇಶಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ 'ಮುಕ್ತ' ಸಂಬಂಧಗಳ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕರೆ