ಐಎಂಎ ಪಾಸಿಂಗ್ ಔಟ್ ಪರೇಡ್ 2023: 331 ಕೆಡೆಟ್‌ಗಳು ಭಾರತೀಯ ಸೇನೆಗೆ ಸೇರ್ಪಡೆ - ಭಾರತೀಯ ಸೇನೆ
🎬 Watch Now: Feature Video
ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ನಲ್ಲಿ ಇಂದು ನಡೆದ ಪಾಸಿಂಗ್ ಔಟ್ ಪರೇಡ್ (ಪಿಒಪಿ) ಕಾರ್ಯಕ್ರಮದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಪರಿಶೀಲನಾ ಅಧಿಕಾರಿಯಾಗಿ ಭಾಗವಹಿಸಿದರು. ಏಳು ಸೌಹಾರ್ದ ದೇಶಗಳ 42 ಕೆಡೆಟ್ ಸೇರಿದಂತೆ 374 ಕೆಡೆಟ್‌ಗಳು ತಮ್ಮ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಸೇನಾ ಅಧಿಕಾರಿಗಳಾಗಿ ಪದವಿ ಪಡೆದುಕೊಂಡರು.
374ರ ಪೈಕಿ 331 ಜನರು ಭಾರತದಿಂದ ಪದವೀಧರರಾಗಿದ್ದು, 63 ಕೆಡೆಟ್‌ಗಳು ಉತ್ತರ ಪ್ರದೇಶದವರಾಗಿದ್ದಾರೆ. ಇನ್ನು ಬಿಹಾರದಿಂದ 33, ಹರಿಯಾಣದಿಂದ 32, ಮಹಾರಾಷ್ಟ್ರದಿಂದ 26, ಉತ್ತರಾಖಂಡದಿಂದ 25, ಕರ್ನಾಟಕದಿಂದ 11, ತಮಿಳುನಾಡಿನಿಂದ 8, ಕೇರಳದಿಂದ 5, ತೆಲಂಗಾಣದಿಂದ 3 ಮತ್ತು ಆಂಧ್ರಪ್ರದೇಶದಿಂದ ಓರ್ವರು. ದಕ್ಷಿಣದಿಂದ ಉತ್ತೀರ್ಣರಾದ ಕೆಡೆಟ್‌ಗಳ ಸಂಖ್ಯೆ ಕಡಿಮೆಯಾಗಿದೆ.
ಪಂಜಾಬ್ (23), ರಾಜಸ್ಥಾನ ಮತ್ತು ಮಧ್ಯಪ್ರದೇಶ (ತಲಾ 19), ಹಿಮಾಚಲ ಪ್ರದೇಶ (17), ದೆಹಲಿ (12), ಜಾರ್ಖಂಡ್ (8), ಅರುಣಾಚಲ (8), ಜಮ್ಮು-ಕಾಶ್ಮೀರ (6), ಛತ್ತೀಸ್‌ಗಢ (5), ಪಶ್ಚಿಮ ಬಂಗಾಳ (3), ಒಡಿಶಾ ಮತ್ತು ಗುಜರಾತ್ (ತಲಾ 2), ಚಂಡೀಗಢ, ಪುದುಚೇರಿ, ಅಸ್ಸೋಂ , ಮಣಿಪುರ ಮತ್ತು ತಿರ್ಪುರ (ತಲಾ 1).
ಇದನ್ನೂ ಓದಿ: plane crash: ಕಣ್ಮರೆಯಾಗಿದ್ದ ನಾಲ್ವರು ಮಕ್ಕಳು 40 ದಿನಗಳ ಬಳಿಕ ಜೀವಂತವಾಗಿ ಪತ್ತೆ!
ಭಾರತೀಯ ಮಿಲಿಟರಿ ಅಕಾಡೆಮಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಕೆಡೆಟ್‌ಗಳು ಇಲ್ಲಿ ತಮ್ಮ ಕಠಿಣ ತರಬೇತಿಯ ನಂತರ ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗುತ್ತಾರೆ. ಕೆಡೆಟ್‌ಗಳು ಇಲ್ಲಿ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಸಿದ್ಧರಾಗಿದ್ದಾರೆ. ವಿವಿಧ ರಾಜ್ಯಗಳಿಗೆ ಸಂಬಂಧಿಸಿದಂತೆ, ಈ ವರ್ಷ ಭಾರತದ ಒಟ್ಟು 331 ಕೆಡೆಟ್‌ಗಳು ಪಾಸಿಂಗ್ ಔಟ್ ಪರೇಡ್ ನಂತರ ಭಾರತೀಯ ಸೇನೆಗೆ ಸೇರಿಕೊಳ್ಳಲಿದ್ದಾರೆ. ಈ ಬಾರಿ ಗರಿಷ್ಠ ಸಂಖ್ಯೆಯ ಜೆಂಟಲ್‌ಮನ್ ಕೆಡೆಟ್‌ಗಳು ಉತ್ತರ ಪ್ರದೇಶದವರು.