ನಂಜುಂಡೇಶ್ವರನಿಗೆ ಒಂದೇ ತಿಂಗಳಲ್ಲಿ 1.55 ಕೋಟಿ ರೂ ಕಾಣಿಕೆ: ಹುಂಡಿಯಲ್ಲಿ ಸಿಕ್ಕ 74 ಪಿಂಕ್ ನೋಟುಗಳು - 25 ವಿದೇಶಿ ನೋಟುಗಳು
🎬 Watch Now: Feature Video
ಮೈಸೂರು: ದಕ್ಷಿಣ ಕಾಶಿಯೆಂದೇ ಖ್ಯಾತಿ ಗಳಿಸಿರುವ ನಂಜನಗೂಡು ನಂಜುಂಡೇಶ್ವರನಿಗೆ ಭಕ್ತರು ಒಂದೇ ತಿಂಗಳಿನಲ್ಲಿ 1.55 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ. ದೇವಾಲಯದಲ್ಲಿ ಇರುವ ಒಟ್ಟು 32 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಅವುಗಳಿಂದ 1,55,00,103 ಕೋಟಿ ರೂ. ನಗದು, 132 ಗ್ರಾಂ 500 ಮಿಲಿಗ್ರಾಂ ಚಿನ್ನ, 3 ಕೆಜಿ 750 ಗ್ರಾಂ ತೂಕದ ಬೆಳ್ಳಿ, 25 ವಿದೇಶಿ ನೋಟುಗಳು ಸಿಕ್ಕಿವೆ. ಆಶ್ಚರ್ಯವೆಂದರೆ ಇತ್ತೀಚೆಗಷ್ಟೇ ಆರ್ಬಿಐ 2000 ರೂ ಮುಖಬೆಲೆಯ ನೋಟುಗಳು ಇನ್ನುಮುಂದೆ ಚಾಲ್ತಿಯಲ್ಲಿರುವುದಿಲ್ಲ. ನೋಟುಗಳಿರುವವರು ಆದಷ್ಟು ಬೇಗ ನೋಟುಗಳನ್ನು ಬ್ಯಾಂಕ್ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಮಯಾವಕಾಶ ನೀಡಿದೆ. ಇದರ ಬೆನ್ನಲ್ಲೇ ಇದೀಗ ಭಕ್ತರು ದೇವಸ್ಥಾನದ ಹುಂಡಿಗಳಿಗೆ 2000 ಮುಖಬೆಲೆಯ ನೋಟುಗಳನ್ನು ಹಾಕಿದ್ದು, ಎಣಿಕೆ ವೇಳೆ 74 ಪಿಂಕ್ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ದೇವಸ್ಥಾನದ 32 ಹುಂಡಿಗಳನ್ನು ಎಣಿಕೆ ಮಾಡಲಾಗಿದೆ.
ಇದನ್ನೂ ಓದಿ: ನಂಜುಂಡೇಶ್ವರನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಹಿತ ₹1.26 ಕೋಟಿ ಕಾಣಿಕೆ ಸಂಗ್ರಹ