ಕೂಡಿ ಬಾಳುವುದರಲ್ಲಿ ಮನುಷ್ಯನ ಬದುಕಿನ ಸಾರ್ಥಕತೆ ಅಡಗಿದೆ: ಗವಿಶ್ರೀ - Gavisiddeshwara

🎬 Watch Now: Feature Video

thumbnail

By

Published : Jul 28, 2023, 1:50 PM IST

ಕೊಪ್ಪಳ: ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಭಾವೈಕ್ಯತೆ, ಸಾಮರಸ್ಯವು ಉತ್ತಮ ಸಮಾಜದ ಆಧಾರ ಸ್ತಂಭಗಳು. ಸಮಾಜಜೀವಿಯಾದ ಮನುಷ್ಯ ಸಾಮಾಜಿಕ ಪರೋಪಕಾರ ಪ್ರಜ್ಞೆಯೊಂದಿಗೆ ಬದುಕಿದಾಗ ಮಾತ್ರ ಒಂದು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಹುಸೇನ್ ಭಾಷಾ ಅಶುರ್ಖಾನ ಮಸೀದಿಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಧರ್ಮ, ಜಾತಿ, ಮತ, ಲಿಂಗ, ಬಣ್ಣ ಆಕಾರಗಳಿಂದ ಬೇರೆ ಬೇರೆಯಾದರೂ ಆತನೊಳಗಿನ ಜೀವಸೆಲೆ ಒಂದೇ ಆಗಿದೆ. ಭಾರತ ಸರ್ವಶ್ರೇಷ್ಠವಾದ ನೆಲ, ವೈವಿಧ್ಯಮಯ ಸಂಸ್ಕೃತಿಯ ಬೀಡು, ಹಲವು ಧರ್ಮ ಜಾತಿ ಭಿನ್ನತೆ, ಏಕತೆ, ಭಾವೈಕತೆಯನ್ನು ಮೆರೆಯುವ ರಾಷ್ಟ್ರ. ಪರಸ್ಪರ ಪ್ರೀತಿ ಸ್ನೇಹ ಬಂಧುತ್ವದಿಂದ ಮನುಷ್ಯನ ಬದುಕು, ಸುಂದರವಾಗಲು ಸಾಧ್ಯವಿದೆ ಎಂದರು. ದೀಪದ ಪ್ರಣತಿ ಮುಸೂರಿಯ ಗಡಿಗಿ ಬೇರೆ ಬೇರೆಯಾದರೂ ಅವುಗಳ ಮೂಲ ಮಣ್ಣೆ, ಮಣ್ಣಿನ ಗುಣ ಧರ್ಮವನ್ನು ಅರಿತು ಬದುಕುವ ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದರು. ನಾನು ಚೆನ್ನಾಗಿ ಬದುಕುತ್ತಾ ಸಮಾಜದಲ್ಲಿರುವ ಇನ್ನೊಬ್ಬರು ಚೆನ್ನಾಗಿ ಬದುಕುವಂತೆ ಬಾಳುವುದೇ ಮನುಷ್ಯನ ನಿಜವಾದ ಬದುಕು ಎಂದರು.

ಮೊಹರಂ ಹಬ್ಬವನ್ನು ಹಿಂದೂ ಮುಸಲ್ಮಾನರು ಭಾವೈಕ್ಯತೆಯಿಂದ ಆಚರಿಸುತ್ತಿರುವುದು ಸಂಭ್ರಮ ಮತ್ತು ಸಂತಸದ ಗಳಿಗೆ. ಈ ಪರಂಪರೆ ಮುಂದುವರೆಯಲಿ, ಇಂದಿನ ನವ ಪೀಳಿಗೆಗೂ ಈ ಪರಂಪರೆಯನ್ನು ಮನದಟ್ಟು ಮಾಡುವಲ್ಲಿ, ಪರಸ್ಪರ ಪ್ರೀತಿ ಸಹಬಾಳ್ವೆ ಸಾಮರಸ್ಯ ಒಡಮೂಡಿಸುವಲ್ಲಿ ಮೊಹರಂ ಹಬ್ಬ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: Male Mahadeshwara Temple: 21 ದಿನದಲ್ಲಿ ಮಲೆಮಾದಪ್ಪನ ಹುಂಡಿಯಲ್ಲಿ ಒಂದೂವರೆ ಕೋಟಿ ರೂಪಾಯಿ ಹಣ! ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.