93ನೇ ಪುಣ್ಯಾರಾಧನೆ ನಿಮಿತ್ತ ಹುಬ್ಬಳ್ಳಿಯ ಸಿದ್ದಾರೂಢರ ತೆಪ್ಪೋತ್ಸವ.. - ಈಟಿವಿ ಭಾರತ್ ಕನ್ನಡ
🎬 Watch Now: Feature Video
ಹುಬ್ಬಳ್ಳಿ ಸಿದ್ದಾರೂಢ ಸ್ವಾಮೀಜಿಯ 93ನೇ ಪುಣ್ಯಾರಾಧನೆ ಹಿನ್ನೆಲೆ ತೆಪ್ಪೋತ್ಸವ (ಜಲ ರಥೋತ್ಸವ) ಜರುಗಿತು. ನಗರದ ಸಿದ್ದಾರೂಢ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ತಪ್ಪೋತ್ಸವ ಜರುಗಿತು. ವಿವಿಧ ಭಾಗಗಳಿಂದ ಬಂದಂತಹ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗಿಯಾಗಿ ಸಿದ್ದಾರೂಢರ ಕೃಪೆಗೆ ಪಾತ್ರರಾದರು. ಕಲ್ಯಾಣಿಯ ಸುತ್ತುವರೆದ ಭಕ್ತರು ತೆಪ್ಪೋತ್ಸವಕ್ಕೆ, ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಭಕ್ತಿ ಮೆರೆದರು. ಕಳೆದ ಎರಡು ವರ್ಷ ಕೊರೊನಾ ಭೀತಿಯಿಂದಾಗಿ ಭಕ್ತರಿಲ್ಲದೆ ಸರಳವಾಗಿ ತೆಪ್ಪೋತ್ಸವವನ್ನು ಆಚರಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿರುವ ಕಾರಣ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಜಲರಥೋತ್ಸವ ನೆರವೇರಿಸಲಾಯಿತು. ರಾಜ್ಯ ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗಿಯಾದರು.
Last Updated : Feb 3, 2023, 8:26 PM IST