ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅಮಿತ್ ಶಾ ಭೇಟಿ: ಸಿಎಂ ನಿವಾಸದಲ್ಲೇ ಸರ್ವಪಕ್ಷ ಸಭೆ! - imphal news
🎬 Watch Now: Feature Video
ಇಂಫಾಲ್ (ಮಣಿಪುರ): ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾಜ್ಯಕ್ಕೆ ಆಗಮಿಸಿದ ಶಾ ಅವರು ಎರಡನೇ ದಿನವಾದ ಮಂಗಳವಾರ ಕೂಡ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ನಿವಾಸದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸಮ್ಮುಖದಲ್ಲಿ ಸರ್ವಪಕ್ಷ ಸಭೆ ನಡೆಸಿ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಾಗೂ ರಾಜ್ಯದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವ ಬಗ್ಗೆ ವಿವರವಾಗಿ ಚರ್ಚಿಸಿದರು.
ಮೇ 3 ರಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ ರಾಜ್ಯಾದ್ಯಂತ ಉಂಟಾದ ಜನಾಂಗೀಯ ಘರ್ಷಣೆಗಳಲ್ಲಿ ಅಂದಾಜು 80 ಜನರು ಮೃತಪಟ್ಟಿದ್ದಾರೆ. ಮತ್ತೆ ಹೊಸದಾಗಿ ಗಲಭೆಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರು ಸೋಮವಾರ ನಾಲ್ಕು ದಿನಗಳ ಸುದೀರ್ಘವಾದ ಭೇಟಿ ಕೈಗೊಂಡಿದ್ದಾರೆ. ಗೃಹ ಕಾರ್ಯದರ್ಶಿಯೊಂದಿಗೆ ಆಗಮಿಸಿದ ಅವರು ಸೋಮವಾರ ಸಿಎಂ ಬಿರೇನ್ ಸಿಂಗ್, ಕೆಲ ಸಚಿವರು ಮತ್ತು ಗುಪ್ತಚರ ಹಾಗೂ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
ಇದನ್ನೂ ಓದಿ: ಬರ್ಮಿಂಗ್ಹ್ಯಾಮ್ನ ಮೊದಲ ಬ್ರಿಟಿಷ್ - ಇಂಡಿಯನ್ ಮೇಯರ್ ಆದ ಹೋಶಿಯಾರ್ಪುರದ ಚಮನ್ ಲಾಲ್..!