ಗಜ ಪಡೆಗಳ ಬೀಡಾದ ಗಡಿ ಜಿಲ್ಲೆ ಚಾಮರಾಜನಗರ.. ಬಂಡೀಪುರ ಬೃಹತ್ ಆನೆ ವಾಸ ಸ್ಥಾನ
🎬 Watch Now: Feature Video
ಚಾಮರಾಜನಗರ : ಹುಲಿ ಗಣತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯ ಬಂಡೀಪುರವು ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ಅರಣ್ಯ ಪ್ರದೇಶವಾಗಿದ್ದು, 1116 ಗಜಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜೊತೆಗೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 484 ಆನೆಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 557 ಆನೆಗಳಿವೆ. ಕಾವೇರಿ ವನ್ಯಜೀವಿ ಧಾಮದಲ್ಲಿ 236 ಆನೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟು ರಾಜ್ಯದಲ್ಲಿ 6395 ಆನೆಗಳಿವೆ ಎಂದು ವರದಿಯಾಗಿದೆ.
2023ರ ಮೇ 17ರಿಂದ 19ರ ವರೆಗೆ ರಾಜ್ಯದ ವಿವಿಧೆಡೆ 3400 ಮಂದಿ ಆನೆ ಗಣತಿ ಕಾರ್ಯ ನಡೆಸಿದ್ದರು. ಆನೆಗಳ ಗುಂಪು, ಲದ್ದಿ, ನೀರಿರುವ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ಎಣಿಸುವ ಆಧಾರದ ಮೇಲೆ ಆನೆ ಗಣತಿ ಕಾರ್ಯ ನಡೆಸಲಾಗಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿರುವ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಅರಣ್ಯ ಸಿಬ್ಬಂದಿಗಳ ನಿರಂತರ ಆರೈಕೆಯಿಂದ ಆನೆ ಸಂತತಿಯಲ್ಲಿ ವೃದ್ಧಿಯಾಗಿದೆ. ಆನೆಗಳು ನಮ್ಮಲ್ಲಿ ಹೆಚ್ಚು ವಾಸ ಮಾಡುತ್ತಿವೆ. ನೀರಿನ ಸೌಕರ್ಯ, ಮೇವು ಸಿಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಕಟ್ಟುನಿಟ್ಟಾಗಿ ಕಾಡಿನ ರಕ್ಷಣೆ ಮಾಡುತ್ತಿರುವುದರಿಂದ ಆನೆಗಳ ಸಂಖ್ಯೆ ವೃದ್ಧಿಯಾಗಿದೆ. ಬಂಡೀಪುರ ಆನೆಗಳ ಸಂಖ್ಯೆಯಿಂದ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಸಂತೋಷವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಕಿರುಬ ಬೆಕ್ಕು: ನಿಟ್ಟುಸಿರು ಬಿಟ್ಟ ಜನ