ಶಿವಮೊಗ್ಗದಲ್ಲಿ ಮಳೆ ಅವಾಂತರ: ಮರ, ವಿದ್ಯುತ್ ಕಂಬ ಧರೆಗೆ; ಮನೆ, ಅಂಗನವಾಡಿಗೆ ಹಾನಿ - ಕರ್ನಾಟಕ ಮಳೆ
🎬 Watch Now: Feature Video
ಶಿವಮೊಗ್ಗ: ಗಾಳಿ, ಮಳೆಗೆ ಶಿವಮೊಗ್ಗದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ನಿನ್ನೆ (ಬುಧವಾರ) ರಾತ್ರಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿಯ ಅಂಕರವಳ್ಳಿ ಗ್ರಾಮದಲ್ಲಿ ಮರವೊಂದು ಮನೆ ಮೇಲೆ ಬಿದ್ದು, ಮನೆ ಭಾಗಶಃ ಹಾನಿಯಾಗಿದೆ. ಜೊತೆಗೆ ಶೆಡ್ನಲ್ಲಿದ್ದ ಕಾರಿಗೂ ಹಾನಿಯಾಗಿದೆ. ಅಲ್ಲದೇ ಅಂಗಡಿಯೊಂದರ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ವಸ್ತುಗಳು ಹಾನಿಗೊಳಗಾಗಿವೆ.
ಅಂಕರವಳ್ಳಿ- ಚಂದ್ರಗುತ್ತಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿವೆ. ತಕ್ಷಣ ಸ್ಥಳೀಯರು ಜೆಸಿಬಿಯಿಂದ ಮರವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಂದ್ರಗುತ್ತಿ ಹೋಬಳಿ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ: 'ಕಳಪೆ ಆಲೂಗೆಡ್ಡೆ ಬೀಜ ವಿತರಣೆ': ನೊಂದು ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಚಿಕ್ಕಮಗಳೂರು ರೈತ!
ಶಿವಮೊಗ್ಗ ಹೊರವಲಯದ ಸಾಗರ ರಸ್ತೆಯಲ್ಲಿನ ಹಕ್ಕಿ ಪಿಕ್ಕಿ ಕ್ಯಾಂಪ್ನಲ್ಲಿ ಮಕ್ಕಳಿಗಾಗಿ ಅಂಗನವಾಡಿ ಟೆಂಟ್ ಹಾಕಲಾಗಿತ್ತು. ಆದ್ರೆ ಗಾಳಿ, ಮಳೆ ಕಾರಣಕ್ಕೆ ಟೆಂಟ್ ಹಾರಿ ಹೋಗಿದ್ದು, ಇಂದು ಮಕ್ಕಳು ಅಂಗನವಾಡಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.