ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ: 2.5 ಟನ್ ಭಾರದ ಕಲ್ಲು ಎಳೆಯುವ ಎತ್ತುಗಳು - ಮುನ್ನೂರು ಕಾಪು ಸಮಾಜ

🎬 Watch Now: Feature Video

thumbnail

By

Published : Jun 3, 2023, 5:47 PM IST

ರಾಯಚೂರು: ರೈತರ ಸಂಭ್ರಮದ ಸಾಂಸ್ಕೃತಿಕ ಮುಂಗಾರು ಹಬ್ಬಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ರೈತನ ಜೊತೆಗಾರ ಎತ್ತುಗಳ ಬಲ ಪ್ರದರ್ಶನ ಈ ಹಬ್ಬದ ಪ್ರಮುಖ ಆಕರ್ಷಣೆ, ಮುನ್ನೂರು ಕಾಪು ಸಮಾಜ ಕಳೆದ 23 ವರ್ಷಗಳಿಂದ ಆಚರಿಸುತ್ತಿರುವ ಈ ಹಬ್ಬ ಸಾಂಸ್ಕೃತಿಕ ಸೊಬಗಿನಿಂದ ಈಗ ಗಮನಸೆಳೆದಿದ್ದು, ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ಇಂದು ಚಾಲನೆ ನೀಡಲಾಯಿತು. 

ನಗರದಲ್ಲಿ ಮೂರು ದಿನಗಳ ಕಾಲ ರಾಯಚೂರು ಹಬ್ಬವನ್ನು ಆಚರಿಸಲಾಗುತ್ತಿದೆ. ರಾಜ್ಯ ಮಟ್ಟದ ಹಾಗೂ ಅಂತಾರಾಜ್ಯ ಮಟ್ಟದ ಎತ್ತುಗಳ ಬಲ ಪ್ರದರ್ಶನ ನಡೆಯುತ್ತದೆ. ಅದಕ್ಕಾಗಿ ವಿವಿಧ ರಾಜ್ಯಗಳಿಂದ ಭೀಮಕಾಯ ಎತ್ತುಗಳು ಬಂದು, ಅವುಗಳ ಶಕ್ತಿ ಪ್ರದರ್ಶಿಸುತ್ತವೆ. ಅದನ್ನು ವೀಕ್ಷಿಸಲು ಸಹಸ್ರಾರು ರೈತರು ನಗರದ ರಾಜೇಂದ್ರ ಗಂಜ್‌ನಲ್ಲಿ ಜಮಾಯಿಸಿ ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುವ ಅಪ್ಪಟ ಉತ್ತರ ಕರ್ನಾಟಕದ ರೈತ ಜನರ ಸಾಂಸ್ಕೃತಿಕ ಹಿರಿಮೆ ಸಾರುವ ಹಬ್ಬ ಇದಾಗಿದೆ. ಈ ಕಾರ ಹುಣ್ಣಿಮೆಯನ್ನು ರೈತರ ಸಾಂಸ್ಕೃತಿಕ ಹಬ್ಬವಾಗಿ ಕಳೆದ 23 ವರ್ಷಗಳಿಂದ ಆಚರಿಸುತ್ತ ಬಂದಿರುವ ರಾಯಚೂರಿನ ಮುನ್ನೂರು ಕಾಪು ಸಮಾಜ ಈ ಆಚರಣೆಯ ನೇತೃತ್ವ ವಹಿಸಿದೆ. 

ಇನ್ನು 1.8 ಟನ್ ಭಾರದ ಕಲ್ಲನ್ನು ನೊಗಕ್ಕೆ ಕಟ್ಟಿ ಎರಡು ಎತ್ತುಗಳು ನಿಗದಿತ ದೂರವನ್ನು ಎಷ್ಟು ಸಮಯದಲ್ಲಿ ಎಳೆದು ಮುಗಿಸುತ್ತವೆ ಎನ್ನುವ ಆಧಾರದಲ್ಲಿ ಬಲ ಪ್ರದರ್ಶಿಸುವ ಎತ್ತುಗಳಿಗೆ ಹಾಗೂ ಅವುಗಳನ್ನು ಸಾಕುತ್ತಿರುವ ಮಾಲೀಕನಿಗೆ ನಗದು ಬಹುಮಾನ ನೀಡುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜೋಡಿ ಓಂಗಲ್ ತಳಿಯ ಎತ್ತುಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿವೆ.

2.5 ಟನ್ ಭಾರದ ಕಲ್ಲು ಎಳೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಈಗಾಗಲೇ ಗಜಗಾತ್ರದ ಎತ್ತುಗಳು ರಾಯಚೂರಿಗೆ ಬಂದಿಳಿದಿವೆ. ಜೊತೆಗೆ ಟಗರು ಕಾಳಗ, ಕುಸ್ತಿ ಪಂದ್ಯ, ವಿವಿಧ ರಾಜ್ಯಗಳ ಕಲಾ ತಂಡಗಳ ಜಾನಪದ ನೃತ್ಯ ವೈಭವ ರಾಯಚೂರಿನಲ್ಲಿ ನಡೆಯುತ್ತಿದೆ. ಇದರ ಜೊತೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 

ಇದನ್ನೂ ನೋಡಿ: ಏಷ್ಯಾದ ಆರು ಹೊಸ ಸ್ಥಳಗಳಿಗೆ ನೇರ ವಿಮಾನಯಾನ ಆರಂಭಿಸಲಿರುವ ಇಂಡಿಗೋ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.