UPSC Result: ಸಣ್ಣ ಪಟ್ಟಣಗಳೇ ದೊಡ್ಡ ಕನಸುಗಳಿಗೆ ದಾರಿ.. ಗುರಿ ಇದ್ದರೆ ಎಲ್ಲವೂ ಸಾಧ್ಯ: ಗರಿಮಾ ಲೋಹಿಯಾ - Civil Services exam
🎬 Watch Now: Feature Video
ಬಕ್ಸಾರ್ (ಬಿಹಾರ) : ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿರುವ ಗರಿಮಾ ಲೋಹಿಯಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಗರಿಮಾ ಬಿಹಾರದ ಬಕ್ಸಾರ್ ಪಟ್ಟಣಕ್ಕೆ ಸೇರಿದವರು. 2020ರಲ್ಲಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರು ಬಕ್ಸಾರ್‌ನಲ್ಲಿರುವ ತನ್ನ ಮನೆಯಲ್ಲಿಯೇ ಕುಳಿತು ಕಠಿಣ ಪರೀಕ್ಷೆಗಳಿಗೆ ತಯಾರಿ ನಡೆಸಿದರು.
ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯುಪಿಎಸ್‌ಸಿ ಟಾಪರ್ ಗರಿಮಾ ಮಾತನಾಡಿದ್ದು, 'ಇಂಟರ್‌ನೆಟ್ ಮತ್ತು ಸೋಶಿಯಲ್ ಮೀಡಿಯಾಗಳ ಯುಗದಲ್ಲಿ ಯಾರಾದರೂ ಸಣ್ಣ ಪಟ್ಟಣದಿಂದ ಬಂದಿದ್ದರೆ ಅದು ಅಷ್ಟೇನೂ ಮುಖ್ಯವಲ್ಲ. ಸಣ್ಣ ಪಟ್ಟಣಗಳಿಂದ ಬಂದವರು ತಮ್ಮ ಕನಸುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಸಣ್ಣ ಪಟ್ಟಣವು ಜನರ ದೊಡ್ಡ ಕನಸುಗಳನ್ನು ಪೋಷಿಸುತ್ತದೆ. ಆದ್ದರಿಂದ, ಸಣ್ಣ ಪಟ್ಟಣ ನನ್ನ ಕನಸುಗಳನ್ನು ಸಾಧಿಸಲು ಅಡ್ಡಿಯಾಗಲಿಲ್ಲ. ನಾನು ನನ್ನ ಗುರಿಯತ್ತ ಗಮನಹರಿಸಿದ್ದೇನೆ' ಎಂದು ಹೇಳಿದರು.
ಯೂಟ್ಯೂಬ್ ವಿಡಿಯೋದಿಂದ ಕಲಿತೆ: ಬಿಹಾರದ ಬಕ್ಸರ್ ಜಿಲ್ಲೆಯ ವುಡ್ ಸ್ಟಾಕ್ ಸ್ಕೂಲ್‌ನಿಂದ ಉತ್ತೀರ್ಣರಾದ ಗರಿಮಾ ತನ್ನ ಪದವಿಯನ್ನು ಪೂರ್ಣಗೊಳಿಸಲು ನವದೆಹಲಿಗೆ ತೆರಳಿದರು. ಕೋವಿಡ್ -19 ಸಮಯದಲ್ಲಿ ಅವರು ಪುನಃ ಮನೆಗೆ ಮರಳಿದರು. ಗರಿಮಾ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ದಾಖಲಾಗಿರಲಿಲ್ಲ. ಸ್ವಯಂ-ಅಧ್ಯಯನದ ಆಧಾರದ ಮೇಲೆ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಯ ತಯಾರಿಯ ಸಲಹೆಗಳ ಕುರಿತು ಮಾತನಾಡಿದ ಗರಿಮಾ, "ನಾನು ಬೇಸಿಕ್ ಪುಸ್ತಕಗಳೊಂದಿಗೆ ಪ್ರಾರಂಭಿಸಿದೆ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಬಹಳ ಕಲಿತಿದ್ದೇನೆ ಎಂದು ಹೇಳಿದರು.
ಬೇಸಿಕ್ ಪುಸ್ತಕಗಳಿಂದ ಪರೀಕ್ಷೆ ತಯಾರಿ ನಡೆಸಿದೆ : ಗರಿಮಾ ಅವರು ಐಎಎಸ್ ಅಧಿಕಾರಿಯಾಗಬೇಕೆಂದು ತಾಯಿ ಬಯಸಿದ್ದರಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 'ನನ್ನ ತಾಯಿಯ ಆಕಾಂಕ್ಷೆಯು ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಾಗಲು ನನ್ನನ್ನು ಪ್ರಚೋದಿಸಿತು. ನಾನು ಮೂಲ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ನಾನು UPSC ಪರೀಕ್ಷೆಯನ್ನು ಭೇದಿಸಲು ಸಹಕಾರಿ ಆಯಿತು ಎಂದು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ರ್ಯಾಂಕ್ನ ಗುಟ್ಟು ಬಿಟ್ಟುಕೊಟ್ಟ ಇಶಿತಾ ಕಿಶೋರ್.. ಹೇಗಿತ್ತು ಗೊತ್ತಾ ಇವರ ತಯಾರಿ!