ETV Bharat / state

ಗ್ರೇಟರ್ ಬೆಂಗಳೂರು ಮಸೂದೆ ವರದಿ ಸಲ್ಲಿಕೆ : 7 ಪಾಲಿಕೆ ರಚನೆ, 30 ತಿಂಗಳ ಮೇಯರ್ ಅವಧಿಗೆ ಸಲಹೆ - REPORT ON GREATER BENGALURU BILL

ಗ್ರೇಟರ್ ಬೆಂಗಳೂರು ಮಸೂದೆ ಪರಿಶೀಲನೆಗೆ ರಚನೆಯಾಗಿದ್ದ ಜಂಟಿ ಸದನ‌ ಸಮಿತಿಯು ತನ್ನ ವರದಿಯನ್ನು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿ​​ಗೆ ಸಲ್ಲಿಸಿದೆ.

joint-legislative-review-committee-submits-report-on-greater-bengaluru-bill
ಬೆಂಗಳೂರು (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Feb 24, 2025, 4:17 PM IST

ಬೆಂಗಳೂರು: ಗರಿಷ್ಠ 7 ಪಾಲಿಕೆಗಳಾಗಿ ವಿಂಗಡಿಸಿ, 30 ತಿಂಗಳ ಮೇಯರ್ ಅವಧಿಯ ಸಲಹೆಯೊಂದಿಗೆ ಗ್ರೇಟರ್ ಬೆಂಗಳೂರು ಮಸೂದೆ ಬಗ್ಗೆ ಜಂಟಿ ಸದನ‌ ಸಮಿತಿಯು ಸ್ಪೀಕರ್ ಯು.ಟಿ. ಖಾದರ್ ಅವರಿ​​ಗೆ ವರದಿ ಸಲ್ಲಿಸಿದೆ. ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಮಸೂದೆ ಮೇಲಿನ ಜಂಟಿ ಸದನ‌ ಸಮಿತಿಯು ವಿಧಾನಸೌಧದಲ್ಲಿ ವರದಿ ಸಲ್ಲಿಕೆ ಮಾಡಿತು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ, ಪ್ರಿಯಕೃಷ್ಣ ಉಪಸ್ಥಿತರಿದ್ದರು. ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ‌. ಖಾದರ್, ಗ್ರೇಟರ್ ಬೆಂಗಳೂರು ಬಿಲ್ ಕಳೆದ ಜುಲೈ ವೇಳೆ ಅಧಿವೇಶನದಲ್ಲಿ ಮಂಡನೆಯಾಗಿತ್ತು.‌ ಅಲ್ಲಿ ಸಮಗ್ರವಾಗಿ ಚರ್ಚೆ ಆಗಿತ್ತು. ಮಸೂದೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ. ಹೀಗಾಗಿ, ಎಲ್ಲಾ ಸದಸ್ಯರು ಜಂಟಿ ಸದನ ಸಮಿತಿ ರಚನೆಗೆ ಮನವಿ ಮಾಡಿದ್ದರು. ಬಳಿಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಲಾಗಿದೆ. ಜಂಟಿ ಸದನ ಸಮಿತಿ ಇದೀಗ ವರದಿ ಸಲ್ಲಿಕೆ ಮಾಡಿದೆ. ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

7 ಪಾಲಿಕೆಗಳಾಗಿ ವಿಂಗಡನೆಗೆ ಸಲಹೆ : ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಜಂಟಿ ಸದನ‌ ಸಮಿತಿಯು 20 ಸಭೆಗಳನ್ನು ನಡೆಸಿದೆ.‌ ಸಾವಿರಾರು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಐದು ತಿಂಗಳಲ್ಲಿ ಈ ಮಸೂದೆ ಸಂಬಂಧ ಸಭೆ ನಡೆಸಿದ್ದೇವೆ‌.‌ ಕಾನೂನು ತಜ್ಞರು, ಬೆಂಗಳೂರು ತಜ್ಞರು ಹಾಗೂ ಸಾರ್ವಜನಿಕರ ಜೊತೆ ಸಭೆ ಮಾಡಿದ್ದೇವೆ. ಇದೀಗ ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಕೆ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡನೆ ಆಗಲಿದೆ ಎಂದರು.

ಬೆಂಗಳೂರು ನಗರ ದೇಶದ ಆರ್ಥಿಕತೆಗೆ ಕೇಂದ್ರ ಬಿಂದುವಾಗಿದೆ. 400 ಫಾರ್ಚೂನ್ ಕಂಪನಿಗಳು ಬೆಂಗಳೂರಲ್ಲಿವೆ. ಬೆಂಗಳೂರು ಎಲ್ಲರ ಕನಸಿನ ನಗರವಾಗಿದೆ. ಅದಕ್ಕೆ ಪೂರಕವಾಗಿ ಆಡಳಿತ ಶಕ್ತಿ, ಅಭಿವೃದ್ಧಿ, ಜನರಿಗೆ ಬೇಕಾದ ಸೌಲತ್ತು ಒದಗಿಸುವ ಆಡಳಿತಾತ್ಮಕ ರಚನೆ ಸಿದ್ಧಮಾಡಬೇಕಿತ್ತು. ಹಾಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಜನರಿಗೆ ಸಹಾಯ ಆಗುತ್ತಿದೆಯಾ ಎಂದು ಕೇಳಿದಾಗ, ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದ್ದಾರೆ‌. ಒಂದೇ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ಸದ್ಯ ಬಿಬಿಎಂಪಿ 870 ಚದರ್​ ಕಿ.ಮೀ. ವ್ಯಾಪ್ತಿ ಇದೆ. ಹೀಗಾಗಿ, ಸಣ್ಣ ಪಾಲಿಕೆಗಳ ರಚನೆ ಅಗತ್ಯ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1.51 ಕೋಟಿ ಜನಸಂಖ್ಯೆ ಇದೆ. ಹೀಗಾಗಿ, ಸಣ್ಣ ಪಾಲಿಕೆಗಳಾಗಿ ವಿಂಗಡನೆ ಮಾಡಬೇಕು ಎಂಬ ಸಲಹೆ ನೀಡಿದ್ದೇವೆ. ಗರಿಷ್ಠ ಏಳು ಪಾಲಿಕೆ ರಚನೆ ಮಾಡುವ ಅವಕಾಶ ನೀಡಿದ್ದೇವೆ. ಒಂದೇ ಬಾರಿಗೆ ಏಳು ಪಾಲಿಕೆ ರಚನೆ ಮಾಡಬೇಕು ಎಂದಿಲ್ಲ‌‌. ಮುಂದಿನ ದಿನಗಳಲ್ಲಿ ಪಾಲಿಕೆಗಳ ವಿಂಗಡನೆ ಮಾಡಲು ಸಲಹೆ ನೀಡಿದ್ದೇವೆ. ಸಂದರ್ಭಕ್ಕನುಸಾರ ಪಾಲಿಕೆಗಳ ರಚನೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಶಿಫಾರಸು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರತಿ ಪಾಲಿಕೆಯಲ್ಲಿ 100-125 ವಾರ್ಡ್ ರಚನೆ : ಪಾಲಿಕೆ ವಿಂಗಡನೆ ಮಾಡುವಾಗ ಆದಾಯ ಸಂಗ್ರಹವನ್ನು ಗಮದಲ್ಲಿಟ್ಟುಕೊಂಡು ಪಾಲಿಕೆ ರಚನೆ ಮಾಡುವಂತೆ ಸಲಹೆ ನೀಡಿದ್ದೇವೆ.‌ ಹೀಗಾಗಿ, ಆದಾಯ ಕೊರತೆ ಆಗದಂತೆ ಪಾಲಿಕೆ ರಚನೆ ಮಾಡಲು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಸದ್ಯದ ಸ್ಥಿತಿಯಲ್ಲಿ ಪಾರದರ್ಶಕತೆ ಇಲ್ಲ. ಹೀಗಾಗಿ, ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪಾಲಿಕೆ ವಿಂಗಡನೆ ಆಗಬೇಕು. ಪ್ರತಿ ಪಾಲಿಕೆಗೆ 100-125 ವಾರ್ಡ್​ಗಳು ಇರಬೇಕು ಎಂದು ಸಲಹೆ ನೀಡಿದ್ದೇವೆ. ಪ್ರತಿ ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಲಿದೆ ಎಂದು ರಿಜ್ವಾನ್ ಅರ್ಷದ್ ವಿವರಿಸಿದರು.

ಹೊಸ ಪಾಲಿಕೆಗಳಿಗೆ ಬೆಂಗಳೂರು ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಹೆಸರೇ ಇರಬೇಕು. ಬೇರೆ ಹೆಸರು ಇಡಬಾರದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದಾಯ ಸಂಗ್ರಹದ ಮಾನದಂಡದ ಮೇಲೆನೇ ಪಾಲಿಕೆ ರಚನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಪಾಲಿಕೆಗೆ ಸೇರಿಸಬಹುದು ಎಂದೂ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಸಮನ್ವಯತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಬೆಂಗಳೂರಿನ ವಿವಿಧ ನಗರ ಮೂಲಸೌಕರ್ಯ ಏಜೆನ್ಸಿಗಳ ಮಧ್ಯೆ ಸಮನ್ವಯತೆ ಇಲ್ಲ. ಜಲಮಂಡಳಿ, ಬೆಸ್ಕಾಂ, ಬಿಡಿಎ ಸೇರಿದಂತೆ ನಗರ ಮೂಲಸೌಕರ್ಯ ಅಭಿವೃದ್ಧಿ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಪ್ರಾಧಿಕಾರದ ಉಪಾಧ್ಯಕ್ಷರಾಗಿರುತ್ತಾರೆ ಎಂದರು.

ಸಮಾಲೋಚನಾ ಸಮಿತಿ ರಚನೆಗೆ ಸಲಹೆ ನೀಡಿದ್ದೇವೆ. ವಿಧಾನಸಭಾ ಕ್ಷೇತ್ರವಾರು ಸಮಾಲೋಚನಾ ಸಮಿತಿ ರಚನೆ ಮಾಡಲು ಸಲಹೆ ನೀಡಿದ್ದೇವೆ. ಆಂತರಿಕ ಆಡಿಟ್ ಆಗಬೇಕು.‌ ಪ್ರತಿ ಪಾಲಿಕೆಗಳಲ್ಲಿ ಆಂತರಿಕ ಆಡಿಟ್ ಆಗಬೇಕು ಎಂದು ಶಿಫಾರಸು ಮಾಡಿದ್ದೇವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಲಹೆ ನೀಡಿದ್ದೇವೆ ಎಂದು ರಿಜ್ವಾನ್ ಅರ್ಷದ್ ವಿವರಿಸಿದರು.

ಮೇಯರ್ ಕಾಲಾವಧಿ 30 ತಿಂಗಳ ವಿಸ್ತರಣೆಗೆ ಸಲಹೆ : ಮೇಯರ್ ಕಾಲಾವಧಿಯನ್ನು ಪ್ರಸಕ್ತ ಇರುವ 11 ತಿಂಗಳಿಂದ 30 ತಿಂಗಳಿಗೆ ವಿಸ್ತರಣೆ ಮಾಡಲು ಜಂಟಿ ಸದನ ಸಮಿತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಮೇಯರ್ ಕಾಲಾವಧಿ 30 ತಿಂಗಳು ಇರಬೇಕು. ಐದು ವರ್ಷದಲ್ಲಿ ಇಬ್ಬರೇ ಮೇಯರ್ ಇರಬೇಕು ಎಂದು ಶಿಫಾರಸು ಮಾಡಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಕಂಡಕ್ಟರ್ ಮೇಲೆ ರಾತ್ರೋ ರಾತ್ರಿ ಪೋಕ್ಸೋ ಕೇಸ್: ಸಿಪಿಐ ಕರ್ತವ್ಯ ನಿಭಾಯಿಸಲು ವಿಫಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ

ಕಾಲಮಿತಿಯಲ್ಲೇ ಚುನಾವಣೆ ಆಗಬೇಕು. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರ್ಡ್ ಬೌಂಡರಿ ನಿಗದಿ ಮಾಡಬೇಕು. ಜೂನ್ ಒಳಗೆ ವಾರ್ಡ್ ಬೌಂಡರಿ ನಿಗದಿ ಮಾಡಬೇಕು. ಜುಲೈ-ಆಗಸ್ಟ್ ವೇಳೆಗೆ ಈ ಮಸೂದೆ ಪ್ರಕಾರ ಚುನಾವಣೆ ನಡೆಸಬಹುದಾಗಿದೆ ಎಂದರು.

ಬಿಜೆಪಿಯವರಿಂದಲೂ ಸಹಮತ : ಬಿಜೆಪಿ ಸದಸ್ಯರು ಒಳಗೊಂಡಂತೆ ಎಲ್ಲಾ ಸದಸ್ಯರು ವರದಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸದಸ್ಯರೂ ಸಲಹೆ ಸೂಚನೆ ಕೊಟ್ಟಿದ್ದಾರೆ‌. ಎಲ್ಲರೂ ಒಂದಾಗಿ ವರದಿ ಸಿದ್ಧಪಡಿಸಿದ್ದೇವೆ. ಪ್ರಸಕ್ತ ಮಸೂದೆಯಲ್ಲಿ ಆದಾಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಎಲ್ಲಾ ಪಾಲಿಕೆಗಳಿಗೆ ವಿತರಿಸುವ ಅಂಶದ ಬಗ್ಗೆ ಬಿಜೆಪಿ ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ರೀತಿ ಇರಬಾರದು‌‌. ಆದಾಯ ನೇರವಾಗಿ ಆಯಾ ಪಾಲಿಕೆಗಳಿಗೆ ಹೋಗಬೇಕು ಎಂಬ ಸಲಹೆ ನೀಡಿದ್ದರು. ಅದನ್ನು ನಾವೂ ಒಪ್ಪಿಕೊಂಡಿದ್ದು, ಆ ಅಂಶವನ್ನು ವರದಿಯಲ್ಲಿ ಶಿಫಾರಸು ಮಾಡಿದ್ದೇವೆ. ಜಂಟಿ ಸದನ ಸಮಿತಿಯ ಅಂತಿಮ ಸಭೆಯಲ್ಲಿ ಬಿಜೆಪಿ ಸದಸ್ಯರು ವರದಿಗೆ ಸಹಿ ಹಾಕಿದ್ದಾರೆ‌. ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಅವರಿಗೂ ಮನವರಿಕೆ ಆಗುತ್ತದೆ ಎಂದು ಇದೇ ವೇಳೆ ರಿಜ್ವಾನ್ ಅರ್ಷದ್ ತಿಳಿಸಿದರು.

ಇದನ್ನೂ ಓದಿ: 'ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡ್ತಿದ್ದಾರೆ ಅನ್ನೋದನ್ನು ಮೊದಲು ಹೇಳಲಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.