ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ಕ್ಷಣಗಣನೆ: ಭವ್ಯ ಭವನದ ಸೊಗಸು ಹೀಗಿದೆ!

🎬 Watch Now: Feature Video

thumbnail

By

Published : May 26, 2023, 6:35 PM IST

ನವದೆಹಲಿ: ಮೇ 28 ರಂದು ಭಾನುವಾರ ನೂತನ ಸಂಸತ್ ಕಟ್ಟಡದ ಉದ್ಘಾಟನೆಯಾಗಲಿದೆ. ಇದು ಸೊಗಸಾದ ಕಲಾಕೃತಿ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಭಾರತದ ಹೆಮ್ಮೆಯ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಸಂಸತ್​ ಭವನದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಅದರ ಭವ್ಯ ನೋಟವನ್ನು ನೀವು ಒಮ್ಮೆ ಕಣ್​ ತುಂಬಿಕೊಳ್ಳಿ. 

 ನೂತನ ಸಂಸತ್ ಭವನದ ಉದ್ಘಾಟನೆಯ ಸವಿನೆನಪಿಗಾಗಿ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಕೂಡ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. 2011 ರ ನಾಣ್ಯ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಸಚಿವಾಲಯ ಈ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಭಾರತದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಶಾಸಕಾಂಗ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ 11:30 ಕ್ಕೆ ಸಂಸತ್ತಿನ ಸದಸ್ಯರು, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸದಸ್ಯರು, ಸಭಾಪತಿಗಳು ಮತ್ತು ಇತರ ಗಣ್ಯ ಅತಿಥಿಗಳು ಸೇರಿದಂತೆ ಎಲ್ಲಾ ಆಹ್ವಾನಿತರು ಹೊಸ ಕಟ್ಟಡದಲ್ಲಿರುವ ಲೋಕಸಭೆಯ ಚೇಂಬರ್‌ನಲ್ಲಿ ಕುಳಿತುಕೊಳ್ಳುವ ನಿರೀಕ್ಷೆಯಿದೆ. ಇನ್ನು ಅದ್ಧೂರಿಯಾಗಿ ಉದ್ಘಾಟನೆಯಾಗಲಿರುವ ಹೊಸ ಸಂಸತ್ತಿನ ಕಟ್ಟಡದ ಆಕಾರ ಹೇಗಿದೆ? ಅದರ ವಿನ್ಯಾಸ ಮತ್ತು ವೈಶಿಷ್ಟ್ಯತೆ ಹೇಗಿದೆ ಗೊತ್ತಾ? ಈ ವಿಡಿಯೋ ನೋಡಿ. 

ಇದನ್ನೂ ಓದಿ: ತಾಕತ್ತಿದ್ದರೆ ಆರ್​ಎಸ್ಎಸ್, ಬಜರಂಗದಳ ನಿಷೇಧಿಸಲಿ: ಕಾಂಗ್ರೆಸ್​ಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.