ಬಾವಿಗೆ ಬಿದ್ದ ಶ್ವಾನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ: ಕಾರ್ಯಾಚರಣೆಯ ವಿಡಿಯೋ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Mar 23, 2023, 2:16 PM IST

ಚಿಕ್ಕೋಡಿ (ಬೆಳಗಾವಿ) : ಮೆಟ್ಟಿಲುಗಳಿಲ್ಲದ ಅಂದಾಜು 50 ಅಡಿ ಆಳದ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಇದಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಮಹಾದೇವ ಪೂಜಾರಿ ಎಂಬುವರ ತೆರೆದ ಬಾವಿಯಲ್ಲಿ ಇವರ ಪಕ್ಕದ ಮನೆಯವರ ಸಾಕು ನಾಯಿ ಬಿದ್ದಿತ್ತು. ಬಾವಿಯಲ್ಲಿ ಬಿದ್ದಿದ್ದ ಶ್ವಾನವನ್ನು ಕಂಡ ಸ್ಥಳೀಯರು ಅಥಣಿಯ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಶ್ವಾನವನ್ನು ಜೀವಂತವಾಗಿ ಮೇಲೆತ್ತುವಲ್ಲಿ ಯಶಸ್ವಿಯಾದರು. ಶ್ವಾನ ಸಾವಿನ ದವಡೆಯಿಂದ ಪಾರಾಯಿತು.

ಎಮ್.ಎಮ್.ಬಂದಾಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಆಸಿಫ್ ಅಹಮದ್ ಸನದಿ, ಸುರೇಶ್ ಮಾದರ, ಎಸ್.ಡಿ.ಹಣಮಾಪೂರ, ಆರ್.ಎಲ್.ಸಂಗಮ ಮತ್ತು ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಂಥ ಅನೇಕ ರಕ್ಷಣಾ ಕಾರ್ಯಗಳಲ್ಲಿ ತಕ್ಷಣ ಪಾಲ್ಗೊಳ್ಳುವ ಅಗ್ನಿಶಾಮಕ ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : 90 ಸಾವಿರ ನಾಣ್ಯಗಳನ್ನೇ ನೀಡಿ ಕನಸಿನ ಸ್ಕೂಟರ್​ ಖರೀದಿಸಿದ ವ್ಯಕ್ತಿ: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.