ಬಂಕ್​ನಲ್ಲಿ ಕ್ಯಾನ್​ಗೆ ಪೆಟ್ರೋಲ್​ ತುಂಬಿಸುವಾಗ ಹೊತ್ತಿಕೊಂಡ ಬೆಂಕಿ; ಮಗಳು ಸಾವು, ತಾಯಿ ಸ್ಥಿತಿ ಗಂಭೀರ - ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ

🎬 Watch Now: Feature Video

thumbnail

By

Published : May 20, 2023, 1:18 PM IST

ತುಮಕೂರು: ಪೆಟ್ರೋಲ್ ಬಂಕ್​ನಲ್ಲಿ ಬೈಕ್​ನಲ್ಲಿ ಕುಳಿತು ಕ್ಯಾನ್​ಗೆ ಪೆಟ್ರೋಲ್​ ತುಂಬಿಸುವಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮಗಳು ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು ಘಟನೆಯ ದೃಶ್ಯಾವಳಿಗಳು ಪೆಟ್ರೋಲ್​ ಬಂಕ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 18 ವರ್ಷದ ಭವ್ಯ ಮೃತ ಯುವತಿ ಮತ್ತು ರತ್ನಮ್ಮ (46) ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಇವರು ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಗಳು. 

ಮೊದಲು ಬೆಂಕಿ ಕ್ಯಾನ್​ಗೆ ಹೊತ್ತಿಕೊಂಡಿದೆ. ಇದರಿಂದ ಬೈಕ್​ನಲ್ಲಿ ಕುಳಿತಿದ್ದ ಮಗಳು ಕ್ಯಾನ್​ ಬೈಕ್ ಸಮೇತ ಬಿಟ್ಟು ಓಡಲು ಯತ್ನಿಸಿದಾಗ ಕ್ಯಾನ್​ನಲ್ಲಿದ್ದ ಪೆಟ್ರೋಲ್​ ಈಕೆ ಮೇಲೆಯೇ ಚೆಲ್ಲಿದೆ. ಇದರಿಂದ ಪಕ್ಕದಲ್ಲಿ ನಿಂತಿದ್ದ ತಾಯಿ ಮೇಲೂ ಬೆಂಕಿ ಹತ್ತಿದೆ. ತಾಯಿ ಓಡಿದ್ದು, ಅಲ್ಲಿ ನೆರೆದಿದ್ದವರು ಸೇರಿ ಸ್ವಲ್ಪದರಲ್ಲೇ ಬೆಂಕಿ ಆರಿಸಿದ್ದಾರೆ. ಆದರೂ ಬೆಂಕಿಯ ಜ್ವಾಲೆಯಿಂದ ಗಂಭೀರ ಗಾಯಗಳಾಗಿವೆ. 

ಆದರೆ ಮಗಳ ಮೇಲೆ ಬೆಂಕಿ ಸಂಪೂರ್ಣ ಹೊತ್ತಿಕೊಂಡಿದ್ದರಿಂದ ಆಕೆಯ ಸ್ಥಿತಿ ಚಿಂತಾಜನಕವಾಗಿತ್ತು. ಇಬ್ಬರು ಗಾಯಾಳುಗಳನ್ನು ತಕ್ಷಣವೇ ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳು ಭವ್ಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗನಿಂದಲೇ ಹಲ್ಲೆ.. ಗಂಭೀರ ಗಾಯಗೊಂಡಿದ್ದ ತಂದೆ ಚಿಕಿತ್ಸೆ ಫಲಿಸದೆ ಸಾವು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.