ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ: ಹುಲಿ ವೇಷ ತೊಟ್ಟು ಕುಣಿದು ಹರಕೆ ತೀರಿಸಿದ ಭಕ್ತರು...
🎬 Watch Now: Feature Video
ಗದಗ: ಮೊಹರಂ ಹಬ್ಬದ ನಿಮಿತ್ತ ಹುಲಿ ವೇಷ ತೊಟ್ಟು ಕುಣಿದು ಹರಕೆ ತೀರಿಸುವ ವಿಶಿಷ್ಟವಾದ ಆಚರಣೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಜರುಗಿತು. ಜಿಲ್ಲಾದ್ಯಂತ ವಿವಿಧ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಗಜೇಂದ್ರಗಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ವೇಷಧಾರಿಗಳು ಕುಣಿತದ ಮೆರವಣಿಗೆ ನೋಡಲು ಎರಡು ಕಣ್ಣುಗಳು ಸಾಲದು.
ಹೌದು, ಹರಕೆ ಹೊತ್ತು ನೂರಾರು ಮಕ್ಕಳು ಹಾಗೂ ಯುವಕರು ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುವುದನ್ನು ನೋಡುವುದೇ ಒಂದು ಖುಷಿ. ಹಲಗೆ ಸೌಂಡ್ಗೆ ಹುಲಿ ವೇಷಧಾರಿಗಳು ಸಖತ್ ಸ್ಟೆಪ್ ಹಾಕುವುದು. ಜನ ಕೇಕೆ, ಸಿಳ್ಳೆ ಹೊಡೆಯುವುದು. ಚುರುಮುರಿ ಎರಚುವುದನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಮೊಹರಂ ಹಬ್ಬದ ಕತ್ತಲು ರಾತ್ರಿ ದಿನದಂದು ಪಟ್ಟಣದ ತೆಕ್ಕದ ಮೊಲಾಲಿ ಮಸೀದಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋರ್ಪಡೆ ವಾಡೆವರೆಗೆ ಮೆರವಣಿಗೆ ನಡೆಯಿತು.
ಹುಲಿ ವೇಷ ಕುಣಿತ ವೀಕ್ಷಿಸಿ ಸಂತಸ ಪಟ್ಟ ಜನರು: ಹುಲಿ ವೇಷ ಕುಣಿತ ನೋಡಲು ಜನ ಸಾಗರವೇ ಸೇರಿತ್ತು. ಹರಕೆ ಹೊತ್ತ ನೂರಾರು ಹುಲಿ ವೇಷಧಾರಿಗಳ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ತಮಗೆ ಕಷ್ಟಗಳು ಬಂದಾಗ ಬೇಡಿಕೊಂಡಿದ್ದು, ಹರಕೆ ಕಟ್ಟಿಕೊಂಡಿದ್ದೆವು. ಕಷ್ಟಗಳು ದೂರವಾಗಿ, ಬೇಡಿಕೆಗಳು ಇಷ್ಟಾರ್ಥಗಳು ಈಡೇರಿದ್ದರಿಂದ ಪ್ರತಿ ವರ್ಷ ಹುಲಿ ವೇಷ ಹಾಕಿ ಕುಣಿದು ನಮ್ಮ ಹರಕೆ ತೀರುಸುತ್ತೆವೆ ಅಂತಿದ್ದಾರೆ ಹುಲಿ ವೇಷಧಾರಿಗಳು. ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವ ಮೊಹರಂ ಹಬ್ಬವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಿರುವುದು ತುಂಬಾ ಖುಷಿ ವಿಚಾರ.
ಇದನ್ನೂ ಓದಿ: ಬೆಳಗಾವಿ: ಮುಸ್ಲಿಮರಿಲ್ಲದ ಊರಲ್ಲಿ ಹಿಂದೂಗಳಿಂದಲೇ ಮೊಹರಂ ಆಚರಣೆ..