ದಾವಣಗೆರೆ.. ಅಡಕೆ ತುಂಬಿದ್ದ ಟ್ರ್ಯಾಕ್ಟರ್ ಹರಿದು ರೈತ ಸಾವು - ದೊಡ್ಡೇರಿಕಟ್ಟೆ ಗ್ರಾಮ
🎬 Watch Now: Feature Video


Published : Dec 1, 2023, 2:47 PM IST
ದಾವಣಗೆರೆ: ಅಡಕೆ ಅನ್ಲೋಡ್ ಮಾಡುವ ವೇಳೆ ರೈತನೊಬ್ಬ ಟ್ರ್ಯಾಕ್ಟರ್ ಕೆಳಗಿ ನಿಂತು ಚಾವಿ ಆನ್ ಮಾಡಿದ ಪರಿಣಾಮ ಅಡಕೆ ತುಂಬಿದ ಟ್ರ್ಯಾಲಿ ಸಹಿತ ಟ್ರ್ಯಾಕ್ಟರ್ ರೈತನ ಮೇಲೆ ಹರಿದಿದೆ. ಈ ವೇಳೆ, ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ನವೀನ್ ಎಚ್. ಟಿ.(41) ಸಾವನ್ನಪ್ಪಿದ ರೈತ. ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ಹಿನ್ನೆಲೆಯಲ್ಲಿ ದುರ್ಘಟನೆ ನಡೆದಿದೆ. ಮೃತ ರೈತ ನವೀನ್ ಎಚ್.ಟಿ. ಎಂದಿನಂತೆ ತನ್ನ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಟ್ರ್ಯಾಲಿಯಲ್ಲಿದ್ದ ಅಡಕೆಯನ್ನು ಅಡಕೆ ಸುಲಿಯುವ ಯಂತ್ರಕ್ಕೆ ಅನ್ಲೋಡ್ ಮಾಡಲು ಟ್ರ್ಯಾಕ್ಟರ್ ನಿಲ್ಲಿಸಿದ್ದರು. ರೈತ ಟ್ರ್ಯಾಕ್ಟರ್ ಹತ್ತಿ ಚಾವಿ ಆನ್ ಮಾಡದೇ, ಟ್ರ್ಯಾಕ್ಟರ್ ಕೆಳಗೆ ನಿಂತುಕೊಂಡು ಆನ್ ಮಾಡಿದ್ದಾನೆ. ಈ ಸಮಯದಲ್ಲಿ ಏಕಾಏಕಿ ಆನ್ ಆದ ಟ್ರ್ಯಾಕ್ಟರ್ ರೈತನ ಮೇಲೆ ಹರಿದಿದೆ.
ಸ್ಥಳೀಯರು ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ನವೀನ್ನನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಯಾವುದೇ ಪ್ರಯೋಜವಾಗಲಿಲ್ಲ. ರೈತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಜಗಳ: ತಾಯಿ-ಮಗಳ ಮೇಲೆ ಅಮಾನವೀಯ ರೀತಿಯಲ್ಲಿ ಕಬ್ಬಿಣದ ರಾಡ್‌ನಿಂದ ಹಲ್ಲೆ