ಆನೇಕಲ್ನಲ್ಲಿ ಕಾಡಾನೆಗಳ ಹಾವಳಿ.. ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಗಜಪಡೆ - ಕಾಡಾನೆ ದಾಳಿಗೆ ಬೆಳೆ ಹಾನಿ
🎬 Watch Now: Feature Video
ಆನೇಕಲ್: ರೈತನ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈಪುರದೊಡ್ಡಿಯಲ್ಲಿ ನಡೆದಿದೆ. ಎನ್.ಎ. ಶೆಟ್ಟಿ ಎಂಬುವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಕಳೆದ 15 ವರ್ಷಗಳಿಂದ ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆಸಲಾಗಿತ್ತು. ಆದರೆ ತಡರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ 15 ವರ್ಷಗಳಿಂದ ಬೆಳೆದಿದ್ದ ವಿವಿಧ ಬಗೆಯ ಹಣ್ಣುಗಳ ಮರಗಳಾದ ಮಾವಿನ ಮರ, ತೆಂಗಿನ ಮರ, ನೋನಿ ಹಣ್ಣು, ಬಟರ್ ಫ್ರೂಟ್, ಬಾಳೆಹಣ್ಣು ಸೇರಿದಂತೆ ಹಲವಾರು ಬಗೆಯ ಸಸ್ಯಗಳನ್ನು ಹಾನಿಗೊಳಿಸಿವೆ.
ಕಷ್ಟಪಟ್ಟು ಹಣ್ಣಿನ ಮರಗಳನ್ನು ಬೆಳೆಸಿದ್ದ ರೈತ ಈಗ ಕಂಗಲಾಗಿದ್ದು, ಸಾವಿರಾರು ರೂಪಾಯಿ ಬೆಳೆಗಳು ಕಾಡಾನೆ ದಾಳಿಯಿಂದ ನಾಶವಾಗಿವೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು, ಅರಣ್ಯ ಇಲಾಖೆಗೆ ಆನೆಗಳ ಬಗ್ಗೆ ದೂರು ಕೊಟ್ಟಿದ್ರು ಸಹ ಯಾರು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ರೈತ ಆರೋಪಿಸಿದ್ದಾರೆ. ತಮಗಾದ ನಷ್ಟದ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಪೊರಕೆ ಕಡ್ಡಿ ಕೀಳಲು ಹೋದಾಗ ಆನೆ ದಾಳಿ; ತಂದೆ ಬಲಿ, ಮಗ ಪಾರು