ಮಂಡ್ಯ ಸಮೀಪ ಕಾಡಾನೆಗಳ ಹಿಂಡು; ಕಾಡಿಗೆ ಓಡಿಸಲು ಇಸ್ರೇಲ್ ತಂಡದಿಂದ ಡ್ರೋನ್ ಕಾರ್ಯಾಚರಣೆ- ವಿಡಿಯೋ - ಆನೆಗಳು ಕಬ್ಬಿನ ಗದ್ದೆಗಳಲ್ಲಿ ಬೀಡು
🎬 Watch Now: Feature Video
Published : Oct 3, 2023, 10:46 PM IST
ಮಂಡ್ಯ: ಕಾಡಾನೆಗಳ ಹಿಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿವೆ. ಕಳೆದ ಮೂರು ದಿನಗಳಿಂದ ಮಂಡ್ಯ ನಗರ ಸಮೀಪ ದಾಂಗುಡಿ ಇಟ್ಟಿದ್ದು, ವಿವಿಧ ಬೆಳೆಗಳನ್ನು ಹಾನಿಗೊಳಿಸಿವೆ. ಇಸ್ರೇಲ್ ಮೂಲದ ತಜ್ಞರ ತಂಡ ಆನೆಗಳನ್ನು ಕಾಡಿಗೋಡಿಸಲು ಹರಸಾಹಸಪಡುತ್ತಿದೆ.
ಬೂದನೂರು ಗ್ರಾಮದಿಂದ ಚಿಕ್ಕಮಂಡ್ಯದ ಬಳಿ ಆನೆಗಳ ಹಿಂಡು ಕಂಡುಬಂದಿವೆ. ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟು ಆತಂಕ ಸೃಷ್ಟಿಸಿವೆ. ನಿನ್ನೆ ರಾತ್ರಿಯಿಡೀ ಡ್ರೋನ್ ಕಾರ್ಯಾಚರಣೆ ಹಾಗೂ ಗುಂಡಿನ ಶಬ್ದದ ಮೂಲಕ ಚಿಕ್ಕಮಂಡ್ಯದಿಂದ ಬೂದನೂರು ಕಡೆಗೆ ಸುಮಾರು 10 ಕಿ.ಮೀ ಆನೆಗಳನ್ನು ಓಡಿಸಲಾಗಿದೆ. ಕಾರ್ಯಾಚರಣೆ ನೋಡಲು ಜನರೂ ಮುಗಿಬಿದ್ದಿದ್ದರು. ಆನೆಗಳು ಪ್ರತ್ಯಕ್ಷವಾಗಿದ್ದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಗಜಪಡೆಗಳು ಇದೀಗ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದ, ಮಂಡ್ಯ ತಾಲೂಕಿನ ಕಟ್ಟೇದೊಡ್ಡಿ ಗ್ರಾಮದ ಜಮೀನಿನಲ್ಲಿ ಬೀಡುಬಿಟ್ಟಿವೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ವಹಿಸಿದ್ದಾರೆ. ನಗರ ಬಿಟ್ಟು ಕಾಡಿನತ್ತ ಗಜಪಡೆಗಳು ಹೆಜ್ಜೆ ಹಾಕದೆ ಜಮೀನುಗಳಲ್ಲೇ ಇದ್ದು ಆತಂಕ ಸೃಷ್ಟಿಸಿವೆ. ಆನೆಗಳನ್ನು ಕಾಡಿಗಟ್ಟಲು ಡ್ರೋನ್ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂಓದಿ: ಬಸ್, ಟ್ರಕ್ಗಳ ಅಡ್ಡಹಾಕಿ ಆಹಾರ ವಸೂಲಿ ಮಾಡುತ್ತಿರುವ ಗಜರಾಜ