ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ - ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18369905-thumbnail-16x9-ran.jpg)
ಪಾರ್ವತಿಪುರಂ ಮಾನ್ಯಂ (ಆಂಧ್ರ ಪ್ರದೇಶ): ದೇಶದಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಧಗೆ ಹೆಚ್ಚಾಗುತ್ತಿದೆ. ಇದರ ನಡುವೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಕಾಡಾನೆಯೊಂದು ಸೊಂಡಿಲು ಮೂಲಕ ಕೈ ಪಂಪ್ ಒತ್ತಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಕೊಮರಡ ಮಂಡಲದ ವನ್ನಂ ಗ್ರಾಮದ ದೇವಸ್ಥಾನವೊಂದರ ಆವರಣದಲ್ಲಿ ನಾಲ್ಕು ದಿನಗಳ ಹಿಂದೆ ಈ ಅಚ್ಚರಿಯ ಘಟನೆ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಆನೆ ತನ್ನ ಸೊಂಡಿಲಿನ ಸಹಾಯದಿಂದ ಕೈ ಪಂಪ್ ಒತ್ತುತ್ತದೆ. ನಂತರ ನೀರು ಬಂದ ನಂತರ, ಅದನ್ನು ಕುಡಿಯುತ್ತದೆ. ಸುಮಾರು ಸಲ ಹೀಗೆ ಮಾಡಿ ಆನೆಯ ತನ್ನ ಬಾಯಾರಿಕೆ ನೀಗಿಸಿಕೊಂಡಿದೆ.
ಇನ್ನು, ಈ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಕಾಡಾನೆಗಳು ಸಂಚಾರ ಅಧಿಕವಾಗಿದೆ. ಸಮೀಪದ ಕಾಡಿನಿಂದ ನಿರಂತರವಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ ಇಡುತ್ತಲೇ ಇರುತ್ತದೆ. ಬಾಳೆ ತೋಟ ಮತ್ತು ಕಬ್ಬಿನ ಗದ್ದೆಯಲ್ಲಿ ಹಿಂಡಾಗಿ ಆನೆಗಳು ಓಡಾಡುತ್ತವೆ.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ