ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ - ETV Bharath Kannada news
🎬 Watch Now: Feature Video
ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಅನೇಕ ತಿಂಗಳು ಬಾಕಿ ಉಳಿದಿವೆ. ಈ ನಡುವೆ ರಾಜಕೀಯ ಪಕ್ಷದ ಮುಖಂಡರಿಗೆ ಎಚ್ಚರಿಕೆ ಎನ್ನುವಂತೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕೊಪ್ಪ ತಾಲೂಕಿನ ಹಾಡುಗಾರ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನ ಆಗಿಲ್ಲ. ಗಡುವು ನೀಡಿದರೂ ರಸ್ತೆ ಮಾಡಲು ಮುಂದಾಗದ ಹಿನ್ನೆಲೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲ ಸೌಲಭ್ಯ, ರಸ್ತೆ, ಸೇತುವೆಗೆ ಆಗ್ರಹಿಸಿ ಬಿಜೆಪಿ, ಕಾಂಗ್ರೆಸ್ ಬೂತ್ ಸಮಿತಿಯ ಸದಸ್ಯತ್ವಕ್ಕೆ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.
Last Updated : Feb 3, 2023, 8:36 PM IST