ಮಂಡ್ಯದಲ್ಲಿ ಆನೆಗಳನ್ನು ಕಾಡಿಗಟ್ಟಲು ಡ್ರೋನ್ ಕ್ಯಾಮರಾ ಕಾರ್ಯಾಚರಣೆ : ವಿಡಿಯೋ - etv bharat kannada

🎬 Watch Now: Feature Video

thumbnail

By

Published : Aug 1, 2023, 11:07 PM IST

ಮಂಡ್ಯ: ಕಾಡಾನೆ ಹಿಂಡು ಮಂಡ್ಯ – ಕಿರುಗಾವಲು ರಸ್ತೆಯ ಹೆಬ್ಬಕವಾಡಿ ಬಳಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಕಾಡಾನೆಗಳು ತೆಂಗಿನ ತೋಟ, ಕಬ್ಬಿನ ಗದ್ದೆ, ಹೊಲ ಗದ್ದೆಗಳಿಗೆ ನುಗ್ಗಿ ಫಸಲು ತಿಂದು ಹಾಕುವುದರ ಜೊತೆಗೆ ನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆ ಹಿಂಡನ್ನು ಕಾಡಿಗಟ್ಟಲು ಡ್ರೋನ್ ಕ್ಯಾಮರಾವನ್ನು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಆನೆಗಳ ಚಲನವಲನವನ್ನು ಕ್ಯಾಮರಾದಲ್ಲಿ ಗಮನಿಸಿ ಸಾಕಾನೆಗಳ ಸಹಾಯದಿಂದ ಕಾಡಿಗೆ ಓಡಿಸಲಾಗುತ್ತಿದೆ. ಸದ್ಯ ಕಾಡಾನೆ ಹಿಂಡು ಹೆಬ್ಬಕವಾಡಿ – ಚಿಕ್ಕಮುಲಗೂಡು ಪ್ರದೇಶದಲ್ಲಿ ಮಂಗಳವಾರ ಮುಂಜಾನೆಯಿಂದ ಬೀಡು ಬಿಟ್ಟಿವೆ. ಕಬ್ಬಿನ ಗದ್ದೆಯಲ್ಲಿ ಆನೆಗಳು ಬೀಡುಬಿಟ್ಟಿರುವುದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. 

ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ- ಕಿರುಗಾವಲು ರಸ್ತೆ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಹೆಬ್ಬಕವಾಡಿ ಗ್ರಾಮದಿಂದ ಚಿಕ್ಕಮುಲಗೂಡು ಗ್ರಾಮದವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ರಾಮನಗರ ಜಿಲ್ಲೆಯಿಂದ ಮದ್ದೂರಿನ ಶಿಂಷಾ ನದಿ ಪ್ರದೇಶ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಮಾದರಹಳ್ಳಿ, ನೆಲಮಾಕನಹಳ್ಳಿ ಗ್ರಾಮಗಳಿಗೂ ಲಗ್ಗೆ ಇಟ್ಟಿದ್ದವು. ಕಾಡಾನೆ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರೆದಿದ್ದು, ಆರ್‌ಎಫ್‌ಒ ಚೈತ್ರ ನಂದೀಪ್ ಇತರೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 

ಇದನ್ನೂ ಓದಿ: ಮಧ್ಯರಾತ್ರಿ ತಿರುಮಲದ ಕಾಲುದಾರಿಯಲ್ಲಿ ಕರಡಿ ಪ್ರತ್ಯಕ್ಷ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.