ಕೋತಿಗಳ ಹಾವಳಿಗೆ ಬೇಸತ್ತ ಜನ.. ಛಾವಣಿ ಮೇಲಿಂದ ವೃದ್ಧನನ್ನು ತಳ್ಳಿದ ಮಂಗ! ವಿಡಿಯೋ.. - ವಿಡಿಯೋದಲ್ಲಿ ಕೋತಿಯನ್ನು ಓಡಿಸಲು ಯತ್ನ
🎬 Watch Now: Feature Video

ಮಥುರಾ, ಉತ್ತರಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿ ಓಡಿಸಲು ಯತ್ನಿಸುತ್ತಿದ್ದಾಗ ಮಂಗವೊಂದು ವೃದ್ಧನಿಗೆ ಹಿಂದಿನಿಂದ ತಳ್ಳಿದೆ. ಈ ವೇಳೆ, ಮುದುಕ ಛಾವಣಿ ಮೇಲಿಂದ ರಸ್ತೆ ಮೇಲೆ ಬಿದ್ದಿದ್ದಾರೆ. ಮನೆ ಮೇಲಿಂದ ಬಿದ್ದ ಪರಿಣಾಮ ವೃದ್ಧನೂ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಯೋವೃದ್ಧರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಘಟನೆ ಮಥುರಾ ಜಿಲ್ಲೆಯ ಗೌಘಟ್ ಕಾಶ್ಮೀರಿ ಗಲ್ಲಿಯಲ್ಲಿ ನಡೆದಿದೆ.
ಮಥುರಾ ಮತ್ತು ವೃಂದಾವನದಲ್ಲಿ ಕೋತಿಗಳು ಭಯದ ವಾತಾವರಣ ಸೃಷ್ಟಿಸಿವೆ. ಈ ಪ್ರದೇಶದಲ್ಲಿ ಮಂಗಗಳು ಏಕಾಏಕಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತವೆ ಎಂಬ ಆರೋಪವೂ ಕೇಳಿ ಬಂದಿದೆ. ಇದುವರೆಗೂ ಕೋತಿಗಳ ಕಾಟದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಲ್ಲಿನ ವಾಸಿಗಳು ದೂರುತ್ತಿದ್ದಾರೆ. ಮಂಗಗಳ ಕಾಟಕ್ಕೆ ಮಹಿಳೆಯರು, ವೃದ್ಧ ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಮಂಗಗಳ ಹಾವಳಿಯಿಂದ ಸ್ಥಳೀಯರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲವಂತೆ. ಮಂಗಗಳ ಕಾಟದಿಂದ ಕೈಯಲ್ಲಿ ಕೋಲು ಹಿಡಿದುಕೊಂಡೇ ಮನೆಯಿಂದ ಹೊರ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಅಂತಾರೆ ಇಲ್ಲಿನ ಮಂದಿ.
ಓದಿ: ಬಿಲ್ಡಿಂಗ್ ಹತ್ತಿದ ಮಂಗಗಳು.. ತ್ರಿಶೂಲ ಆಕಾರದಲ್ಲಿ ಮೆಣಸಿನ ಕಾಯಿ.. ಚಿತ್ರ - ವಿಚಿತ್ರ