ಬೆಂಗಳೂರು: ಭಯ ಹುಟ್ಟಿಸುವಂತೆ ಸ್ಕೂಟರ್ ಚಲಾಯಿಸಿದ ಯುವಕರು... ವಿಡಿಯೋ! - ಬೆಂಗಳೂರು ಕ್ರೈಂ ನ್ಯೂಸ್
🎬 Watch Now: Feature Video

ಬೆಂಗಳೂರು : ಕಂಠಪೂರ್ತಿ ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಸ್ಕೂಟರ್ ಚಲಾಯಿಸಿದ ಯುವಕರಿಬ್ಬರು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ಕೆಂಗೇರಿಯ ಜ್ಞಾನಭಾರತಿ ಕ್ಯಾಂಪಸ್ ಬಳಿ ನಡೆದಿದೆ. ಮದ್ಯದ ಅಮಲಿನಲ್ಲಿ ಹೋಂಡಾ ಆಕ್ಟಿವಾದಲ್ಲಿ ಬಂದ ಯುವಕರಿಬ್ಬರು ಬೇಕಾಬಿಟ್ಟಿ ರಸ್ತೆಯಲ್ಲಿ ಸಂಚರಿಸುವ ಮೂಲಕ ಇತರೆ ವಾಹನ ಸವಾರರಿಗೆ ಭೀತಿ ಹುಟ್ಟಿಸಿದ್ದಾರೆ. ಕುಡುಕರ ಉಪಟಳ ಕಾರಿನ ಹಿಂಬದಿ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ : ಚಪ್ಪಲಿ ಏಟು ಕೊಟ್ಟ ಮಹಿಳೆ - ವಿಡಿಯೋ
ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಇನ್ನು ವಾರಾಂತ್ಯ ಬಂತೆಂದರೆ ಜ್ಞಾನಭಾರತಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಕುಡುಕರ ಹಾವಳಿ ಅತಿಯಾಗಲಿದ್ದು, ಎಲ್ಲೆಂದರಲ್ಲಿ ಮದ್ಯ ಸೇವಿಸುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇದನ್ನೂ ಓದಿ : Road Accident : ಬೆಳಗ್ಗೆಯೇ ಟೈಟಾದ ಡ್ರೈವರ್.. ಚಿಂತಾಮಣಿಯಲ್ಲಿ ಪಾದಚಾರಿ ಸೇರಿ 7 ಮಂದಿಗೆ ಡಿಕ್ಕಿ ಹೊಡೆದ ಆಟೋ