Viral video: ಕುಡಿದ ಮತ್ತಿನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿದ ಯುವಕ - ಯುವತಿಯರು - ಉತ್ತರಪ್ರದೇಶ ವೈರಲ್ ವಿಡಿಯೋ
🎬 Watch Now: Feature Video
ಉತ್ತರಪ್ರದೇಶ: ಕುಡಿದ ಮತ್ತಿನಲ್ಲಿದ್ದ ಯುವಕ - ಯುವತಿಯರು ರಾಜಧಾನಿ ಲಖನೌದ ವಿಭೂತಿ ಖಂಡದಲ್ಲಿರುವ ಶೃಂಗಸಭೆಯ ಕಟ್ಟಡದ ಹೊರಗಡೆ ಗಲಾಟೆ ಸೃಷ್ಟಿಸಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಧವಾರ ತಡರಾತ್ರಿ ಕಾರಿನಲ್ಲಿ ಬರುತ್ತಿದ್ದ ಮೂವರು ಯುವತಿಯರು ಮೊದಲು ಯುವಕನ ಕಾರಿಗೆ ಡಿಕ್ಕಿ ಹೊಡೆದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಥಳಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಯುವತಿಯರು ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ.
ವಿಡಿಯೋದಲ್ಲೇನಿದೆ?: ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಮೂವರು ಹುಡುಗಿಯರು ಹುಡುಗನನ್ನು ಥಳಿಸುವುದನ್ನು ಕಾಣಬಹುದು. ವಿಭೂತಿಖಂಡ್‌ನಲ್ಲಿರುವ ಶೃಂಗಸಭೆ ಕಟ್ಟಡದಿಂದ ಸ್ವಲ್ಪ ದೂರದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ, ಕ್ಲಬ್‌ನಿಂದ ಹೊರಬಂದ ಯುವತಿರು ಕಾರು ಚಲಾಯಿಕೊಂಡು ಬಂದು ಮುಂದೆ ಇದ್ದ ಯುವಕನ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ, ಮೂವರು ಯುವತಿಯರು ಮತ್ತು ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಭೂತಿಖಂಡ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, "ಈ ವಿಡಿಯೋ ಎಲ್ಲಿಂದ ಬಂದಿದೆ ಎಂದು ತನಿಖೆ ನಡೆಸಲಾಗುತ್ತಿದೆ. ದೂರು ದಾಖಲಾದ ಬಳಿಕ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಇದನ್ನೂ ಓದಿ : ಟೋಲ್ ಪ್ಲಾಜಾದಲ್ಲಿ ಗಲಾಟೆ.. ಯುವಕನನ್ನು ಹಾಕಿ ಸ್ಟಿಕ್ನಿಂದ ಕೊಲೆ ಮಾಡಿದ ದುಷ್ಕರ್ಮಿಗಳು