ಕ್ರಿಕೆಟ್​ ವಿಶ್ವಕಪ್​ ಫೈನಲ್​: ಟೀಂ ಇಂಡಿಯಾಗೆ ಶುಭ ಕೋರಿದ ಶಿವಮೊಗ್ಗದ ಕ್ರಿಕೆಟ್​ ಅಭಿಮಾನಿಗಳು - etv bharat karnataka

🎬 Watch Now: Feature Video

thumbnail

By ETV Bharat Karnataka Team

Published : Nov 18, 2023, 10:55 PM IST

Updated : Nov 19, 2023, 7:06 AM IST

ಶಿವಮೊಗ್ಗ: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ಪಂದ್ಯದಲ್ಲಿ ಭಾರತ ಗೆದ್ದು, ವಿಶ್ವಕಪ್​ ಮುಡಿಗೇರಿಸಿಕೊಳ್ಳಬೇಕು ಎಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಶುಭ ಹಾರೈಸಿದ್ದಾರೆ.

ಕ್ರಿಕೆಟ್ ಆಟಗಾರ್ತಿ ಮೋನಿಕ ಮಾತನಾಡಿ, ನಾಳಿನ ಪಂದ್ಯ ವೀಕ್ಷಿಸಲು ತುಂಬಾ ಉತ್ಸುಕರಾಗಿದ್ದೇವೆ. ಭಾರತ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದರಿಂದ ನಾಳಿನ ಪಂದ್ಯವನ್ನು ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ ಎಲ್​ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.​ ಜಡೇಜಾ ಅವರು ಹಿಂದೆ ಆಸ್ಟ್ರೇಲಿಯಾ ವಿರುದ್ಧ ಒಳ್ಳೆಯ ಪ್ರದರ್ಶನ ನೀಡಿದ್ದರು. ಭಾನುವಾರದ ಪಂದ್ಯದಲ್ಲಿ ಜಡೇಜಾ 5 ವಿಕೆಟ್​ ಕಬಳಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಭಾರತ ತಂಡಕ್ಕೆ ಶುಭ ಕೋರಿದರು.

ಕ್ರಿಕೆಟ್ ಆಟಗಾರ ಹರ್ಮನ್ ಮಾತನಾಡಿ, ಭಾರತ ಸತತವಾಗಿ 10 ಪಂದ್ಯಗಳನ್ನು ಗೆದ್ದಿದ್ದೆ. ಇಂದಿನ ಪಂದ್ಯದಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಬೇಕು. ವಿರಾಟ್ ಕೊಹ್ಲಿ, ಶಮಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್​ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಪಂದ್ಯದಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆ ಇದೆ. ಭಾರತ ಗೆಲ್ಲುತ್ತದೆ ಎಂದು ಶುಭ ಕೋರಿದರು.

ಕ್ರಿಕೆಟ್ ಅಭಿಮಾನಿ ಕವಿತಾ ಮಾತನಾಡಿ, ಭಾರತ ವಿಶ್ವಕಪ್ ಗೆಲ್ಲುತ್ತದೆ. ಭಾರತ ವಿಶ್ವಕಪ್​ ಗೆದ್ದ ನಂತರ ಸಂಭ್ರಮಾಚರಣೆ ನಡೆಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿನಿ ಸಾದಿಯಾ ಮಾತನಾಡಿ, ಬ್ಯಾಟಿಂಗ್​ನಲ್ಲಿ ವಿರಾಟ್​ ಕೊಹ್ಲಿ, ಬೌಲಿಂಗ್​ನಲ್ಲಿ ಮೊಹಮ್ಮದ್​ ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್​ ಕೊಹ್ಲಿ ಶತಕ ಬಾರಿಸುತ್ತಾರೆ ಎಂಬ ನಿರೀಕ್ಷೆ ಇದೆ. ಈ ಸಲ ವಿಶ್ವಕಪ್​ ನಮ್ದೆ ಎಂದು ಭಾರತ ತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ: ವಿಶ್ವಕಪ್ ಫೈನಲ್​ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ವಿಶ್ವಾಸ

Last Updated : Nov 19, 2023, 7:06 AM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.