Rahul Gandhi: ಬೈಕ್ ರಿಪೇರಿ, ಹಮಾಲಿ, ಬಡಿಗನಾದ ಬಳಿಕ ದೋಸೆ ಹಾಕಿ ಗಮನ ಸೆಳೆದ ರಾಹುಲ್ ಗಾಂಧಿ... - ಕಾಂಗ್ರೆಸ್ ವಿಜಯಭೇರಿ ಯಾತ್ರೆ
🎬 Watch Now: Feature Video
Published : Oct 20, 2023, 12:36 PM IST
ತೆಲಂಗಾಣ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ವಿಜಯಭೇರಿ ಯಾತ್ರೆಯ ಭಾಗವಾಗಿ ಜಗ್ತಿಯಾಲ್‌ಗೆ ಹೋಗುತ್ತಿದ್ದ ಸಮಯದಲ್ಲಿ ಎನ್‌ಎಸಿ ಬಸ್ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ನಿಂತಿದ್ದರಿಂದ ಟಿಫಿನ್ ಕಾರ್ಟ್‌ನಲ್ಲಿ ಖಡಕ್ ದೋಸೆ ಹಾಕಿ ಗಮನಸೆಳೆದರು.
ಇತ್ತೀಚೆಗೆ ಸ್ವಯಂ ಸೇವೆಯ ಭಾಗವಾಗಿ ಪಾತ್ರೆ ತೊಳೆದಿದ್ದ ರಾಹುಲ್: ಮತ್ತೊಂದೆಡೆ, ಕಾಂಗ್ರೆಸ್ ನಾಯಕ, ಲೋಕಸಭೆ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಅಮೃತಸರದ ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ, ಸ್ವಯಂ ಸೇವೆಯ ಭಾಗವಾಗಿ ಭಕ್ತರು ಬಳಸಿದ ಪಾತ್ರೆಗಳನ್ನು ತೊಳೆದಿದ್ದರು. ಇದಕ್ಕೂ ಮೊದಲು ಸಿಖ್ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಬಟ್ಟೆ ಸುತ್ತಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದರು. ನಂತರ ಸಿಖ್ ಸಮುದಾಯದವರ ಅತ್ಯುನ್ನತ ಸ್ಥಾನ ಅಕಾಲ್ ತಕ್ತ್ಗೆ ಭೇಟಿ ಕೊಟ್ಟಿದ್ದರು.
ಈ ಹಿಂದೆ, ಬೈಕ್ ರಿಪೇರಿ, ಹಮಾಲಿ ಬಳಿಕ ಬಡಿಗನಾಗಿದ್ದ ರಾಹುಲ್: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಮಣಿಸಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸಾರ್ವಜನಿಕರೊಂದಿಗೆ ಬೆರೆಯುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬೈಕ್ ರಿಪೇರಿ, ಗದ್ದೆಯಲ್ಲಿ ನಾಟಿ, ರೈಲ್ವೆ ಸ್ಟೇಶನ್ ಬಳಿ ಸೂಟ್ಕೇಸ್ ಹೊರುವುದು, ರೈಲಿನಲ್ಲಿ ಜನರೊಂದಿಗೆ ಪ್ರಯಾಣ ಮಾಡಿದ್ದ ನಂತರ, ಬಡಿಗ ಕೆಲಸವನ್ನೂ ಮಾಡಿ ಎಲ್ಲರ ಗಮನ ಸೆಳೆದಿದ್ದರು. ರಾಹುಲ್ ಗಾಂಧಿ ಅವರು ನವದೆಹಲಿಯ ಕೀರ್ತಿನಗರ ಪೀಠೋಪಕರಣ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಸಂವಾದ ಕೂಡ ನಡೆಸಿದ್ದರು.
ಇದನ್ನೂ ಓದಿ: ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ ಸ್ವಯಂಸೇವೆಯ ಭಾಗವಾಗಿ ಪಾತ್ರೆ ತೊಳೆದ ರಾಹುಲ್ ಗಾಂಧಿ