Sandalwood Smuggling: ಪುಷ್ಪ ಸಿನಿಮಾ ರೀತಿಯಲ್ಲಿ 1000 ಕೆಜಿ ಶ್ರೀಗಂಧ ಕಳ್ಳಸಾಗಣೆ.. ಹೆದ್ದಾರಿ ಪೊಲೀಸ್​​ ಬಲೆಗೆ ಬಿದ್ದ ಸ್ಮಗ್ಲರ್​​ - ETV Bharath Kannada news

🎬 Watch Now: Feature Video

thumbnail

By

Published : Aug 2, 2023, 12:49 PM IST

ಕೊಯಮತ್ತೂರು (ತಮಿಳುನಾಡು): ವೆಲ್ಲಲೂರಿನ ಸೇಲಂ - ಕೊಚ್ಚಿನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಷ್ಪ ಸಿನಿಮಾ ರೀತಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 1000 ಕೆಜಿ ತೂಕದ ಶ್ರೀಗಂಧವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರ್ನಾಟಕದ ನೋಂದಾಯಿತ ಸಂಖ್ಯೆಯ ಲಾರಿಯಲ್ಲಿ ಕೇರಳದ ಮಲಪ್ಪುರಂನಿಂದ ಚೆನ್ನೈ ಮೂಲಕ ಆಂಧ್ರಪ್ರದೇಶಕ್ಕೆ ಶ್ರೀಗಂಧವನ್ನು ಕಳ್ಳಸಾಗಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.  

ನಿನ್ನೆ (ಆಗಸ್ಟ್​ 1) ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರ ಪೊಲೀಸ್ ಇಲಾಖೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಲಾರಿ ಒಂದು ನಿಲ್ಲಿಸದೇ ಹೋಗಿದ್ದಕ್ಕೆ ಅನುಮಾನಗೊಂಡ ಪೊಲೀಸರು ಹಿಂಬಾಲಿಸಿ ಹೋಗಿ ತಡೆದಿದ್ದಾರೆ. ಸೇಲಂ ಆತೂರ್ ಬಳಿ ಕರ್ನಾಟಕ ನಂಬರಿನ ವಾಹನವನ್ನು ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಆಗ ವಾಹನದಲ್ಲಿ ಪುಷ್ಪ ಸಿನಿಮಾದ ರೀತಿಯಲ್ಲಿ ರಹಸ್ಯ ವಿಭಾಗ ನಿರ್ಮಿಸಿ ಅದರಲ್ಲಿ ಶ್ರೀಗಂಧದ ಮರದ ದಿಮ್ಮಿಗಳನ್ನು ಕಳ್ಳಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ. ವಾಹನ ಚಲಾಯಿಸುತ್ತಿದ್ದ ಮನೋಜ್ ಎಂಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ತನಿಖೆ ವೇಳೆ ಕೇರಳದಿಂದ ಆಂಧ್ರಪ್ರದೇಶಕ್ಕೆ ಶ್ರೀಗಂಧ ಸಾಗಣೆ ಮಾಡುತ್ತಿರುವುದಾಗಿ ಚಾಲಕ ಒಪ್ಪಿಕೊಂಡಿದ್ದಾನೆ. ಇದಾದ ಬಳಿಕ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಮರದ ದಿಮ್ಮಿಗಳನ್ನು ಲಾರಿ ಸಮೇತ ವಶಪಡಿಸಿಕೊಂಡು ಕೊಯಮತ್ತೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.  

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, 57 ಕಟ್ಟುಗಳಲ್ಲಿ 1,051 ಕೆಜಿ ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದನ್ನು ಹಿಡಿಯಲಾಗಿದೆ. ಲಾರಿ ಮೂಲಕ ಕೇರಳದಿಂದ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸೇಲಂಗೆ ತೆರಳಿ ವಾಹನವನ್ನು ಜಪ್ತಿ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.