ಪಾಲ್ಕಿ ಮೆರವಣಿಗೆಯ ವೇಳೆ ಭಕ್ತಾದಿಗಳ ಮತ್ತು ಪೊಲೀಸರ ನಡುವೆ ಮಾರಾಮಾರಿ - ವಿಡಿಯೋ - Police Commissioner Vinoy Kumar Chaubey

🎬 Watch Now: Feature Video

thumbnail

By

Published : Jun 12, 2023, 7:12 AM IST

ಪಂಡರಾಪುರ(ಮಹಾರಾಷ್ಟ್ರ): ಪುಣೆ ಜಿಲ್ಲೆಯಲ್ಲಿ ಪಾಲ್ಕಿ ಮೆರವಣಿಗೆಯ ವೇಳೆ ಪೊಲೀಸರ ಮತ್ತು ವಾರ್ಕಾರಿಗಳ (ವಾರಿ ಯಾತ್ರೆಗೆ ಬರುವ ಭಕ್ತರು) ನಡುವೆ ಮಾರಾಮಾರಿ ನಡೆದಿದೆ. ಫಂಡರಾಪುರ ದೇವಾಲಯದಲ್ಲಿ ವಿಠ್ಠಲ ಮತ್ತು ರುಕ್ಮಿಣಿ ನೆಲೆಸಿದ್ದು, ಇಲ್ಲಿ ನಡೆಯುವ ಪಾಲ್ಕಿ ಮೆರವಣಿಗೆಗೆ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸುತ್ತಾರೆ. ಹೆಚ್ಚು ಜನರು ಸೇರಿ ಕಾಲ್ತುಳಿತ ಉಂಟಾಗುತ್ತದೆ ಎಂಬ ಕಾರಣಕ್ಕೆ ವಿವಿಧ ಗುಂಪುಗಳಿಗೆ ಪ್ರವೇಶ ಪಾಸ್​ಗಳನ್ನು ನೀಡಲಾಗಿದೆ. ಪಾಸ್​ನಲ್ಲಿಯು ನಿರ್ಬಂಧಿತ ಹಂಚಿಕೆ ಇದ್ದು ಇದನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಭಕ್ತರು ಬ್ಯಾರಿಕೇಡ್​ಗಳನ್ನೇ ಮುರಿದು ಮುಂದೆ ಬಂದಾಗ ಪೊಲೀಸರ ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ, ಭಕ್ತಾದಿಗಳ ಮತ್ತು ಪೊಲೀಸರ ಮಧ್ಯೆ ಹೊಡೆದಾಟ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಿಂಪ್ರಿ ಚಿಂಚ್​ವಾಡ್ ಪೊಲೀಸ್ ಕಮಿಷನರ್ ವಿನೋಯ್ ಕುಮಾರ್ ಚೌಬೆ, ಕೆಲ ಸ್ಥಳೀಯ ಯುವಕರು ಪಾಲ್ಕಿ ಮೆರವಣಿಗೆಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಇದರಿಂದ ಪೊಲೀಸರ ಮತ್ತು ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಆದರೆ, ಅವರ ವಿರುದ್ಧ ಪೊಲೀಸರು ಯಾವುದೇ ಲಾಠಿ ಚಾರ್ಜ್​ ಅಥವಾ ಬಲ ಪ್ರಯೋಗ ಮಾಡಿಲ್ಲ ಎಂದು ತಿಳಿಸಿದ್ದಾರೆ. ಆದರೆ, ವಿಡಿಯೋದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಚಾರ್ಜ್​ ಮಾಡಿದಂತೆ ಕಾಣುತ್ತಿದೆ.  

ಇದನ್ನೂ ಓದಿ: Train Accident Averted In Bilaspur: ಒಂದೇ ಹಳಿ ಮೇಲೆ ಬಂದ ಪ್ಯಾಸೆಂಜರ್ ರೈಲು - ಗೂಡ್ಸ್​ ರೈಲು.. ವಿಡಿಯೋ ವೈರಲ್​

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.