'ಸುರರು-ಅಸುರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು..': ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ನುಡಿ- ವಿಡಿಯೋ - ETV Bharat Karnataka
🎬 Watch Now: Feature Video
Published : Oct 25, 2023, 10:02 PM IST
ಚಿಕ್ಕಮಗಳೂರು: ಕಡೂರು ತಾಲೂಕಿನ ಪ್ರಸಿದ್ಧ ಮೈಲಾರಲಿಂಗ ಸ್ವಾಮಿ ಕಾರ್ಣಿಕ ನುಡಿದಿದ್ದು, ಜಗತ್ತು ಶಾಂತಿ ಬಯಸಲಿದೆ ಎಂದು ಹೇಳಿದೆ. ವಿಜಯದಶಮಿಯ ಮರುದಿನ, ಬುಧವಾರ ಬೆಳಗ್ಗೆ 4.42 ರ ವೇಳೆ ಇಡೀ ದಿನ ಉಪವಾಸವಿದ್ದ ದಶರಥ ಪೂಜಾರ್ ಅವರು ಪೂಜೆಯ ಬಳಿಕ ಬಿಲ್ಲನ್ನೇರಿ ಭವಿಷ್ಯವಾಣಿ ಹೇಳಿದ್ದಾರೆ.
ಇಟ್ಟ ರಾಮನ ಬಾಣ ಹುಸಿಯಲ್ಲ. ಸುರ-ಅಸುರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿ ಮಂತ್ರ ಪಠಿಸಿದರು. ಸರ್ವರೂ ಎಚ್ಚರದಿಂದಿರಬೇಕು ಎಂದರು.
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ರಾಮ ಇಟ್ಟ ಬಾಣ ಹೇಗೆ ಗುರಿ ತಪ್ಪುವುದಿಲ್ಲವೋ ಅದೇ ರೀತಿ ಮೈಲಾರಲಿಂಗ ಹೇಳುವ ಮಾತು ತಪ್ಪುವುದಿಲ್ಲ. ಸುರರು-ಅಸುರರು ಕಾದಾಡಿದರು, ಈಗಾಗಲೇ ಜಗತ್ತಿನಲ್ಲಿ ಯುದ್ಧಗಳು ಆರಂಭವಾಗಿವೆ. ಉಕ್ರೇನ್-ರಷ್ಯಾದ ಬಳಿಕ ಹಮಾಸ್-ಇಸ್ರೇಲ್ ಮಧ್ಯೆ ಯುದ್ಧವಾಗುತ್ತಿದೆ. ಅಮೆರಿಕ ಇಸ್ರೇಲ್‍ಗೆ ಸಹಾಯ ಮಾಡುತ್ತಿದ್ದರೆ, ಕೆಲವು ದೇಶಗಳು ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುತ್ತಿದ್ದಾರೆ. ಮುಂದೆಯೂ ಇಂಥ ಸನ್ನಿವೇಶ ನಿರ್ಮಾಣವಾಗಬಹುದು. ದೇಶಗಳು ಸೇರಿದಂತೆ ಜನರು ಎಚ್ಚರದಿಂದ ಇರಬೇಕು ಎಂದು ಮೈಲಾರಲಿಂಗ ಸ್ವಾಮಿಯ ನುಡಿಮುತ್ತುಗಳನ್ನು ಹಿರಿಯರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಮುಳ್ಳಿನ ಗದ್ದಿಗೆ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ.. ಆತಂಕ ಸೃಷ್ಟಿಸಿದೆ ಕಾರ್ಣಿಕ ಭವಿಷ್ಯ