ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೋಮ-ಹವನ: ಸಿಇಒಗೆ ದೂರು - etv bharat kannada
🎬 Watch Now: Feature Video
ಚಾಮರಾಜನಗರ: ನೂತನವಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೋಮ-ಹವನ ಮತ್ತು ಪೂಜೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ನೂತನವಾಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶಿವಿಭಾಯಿ ಹಾಗೂ ಉಪಾಧ್ಯಕ್ಷರಾಗಿ ರಾಚಯ್ಯ ಎಂಬವರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಹೋಮ- ಹವನ ಮತ್ತು ಪೂಜೆ ನೆರವೇರಿಸಿದ್ದು, ಇದರಲ್ಲಿ ಪಿಡಿಒ ಕೂಡ ಭಾಗಿಯಾಗಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಳಿದ ಸದಸ್ಯರು ಸಿಇಒಗೆ ದೂರು ಕೊಟ್ಟಿದ್ದಾರೆ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕು ಮತ್ತು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿನಾಯ್ಕ, ಶಕಿನಬಾನು, ಕುಮಾರ್, ನಾಗನಾಯ್ಕ, ಎಸ್. ಚಂದ್ರಶೇಖರ ಎಂಬವರು ಪ್ರಶ್ನೆ ಮಾಡಿದ್ದಕ್ಕೆ ನಮಗೇ ಧಮ್ಕಿ ಹಾಕುತ್ತಿದ್ದಾರೆ, ಪಿಡಿಒ ಸರಿಯಾಗಿ ಉತ್ತರ ಕೊಡುತ್ತಿಲ್ಲ, ಸರ್ಕಾರಿ ಕಚೇರಿಯಲ್ಲಿ ಮೌಢ್ಯಾಚರಣೆ ಮಾಡಿದ್ದಾರೆ ಎಂದು ಆರೋಪಿಸಿ ಸಿಇಒಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: Yatnal: ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಕಾಂಗ್ರೆಸ್ ಸರ್ಕಾರ ಪತನ ಖಚಿತ: ಶಾಸಕ ಯತ್ನಾಳ್