ಉಡುಪಿಯಲ್ಲಿ ಹಾಲಿನ ಕ್ರೇಟ್​ಗಳಿಗೆ ಪಿಕಪ್ ವಾಹನ ಡಿಕ್ಕಿ: ರಸ್ತೆ ತುಂಬಾ ಕ್ಷೀರ - ವಿಡಿಯೋ - ಉಡುಪಿ

🎬 Watch Now: Feature Video

thumbnail

By ETV Bharat Karnataka Team

Published : Dec 13, 2023, 1:08 PM IST

ಉಡುಪಿ: ನಗರದ ಕಡಿಯಾಳಿಯಲ್ಲಿ ಪಿಕಪ್ ವಾಹನ ಚಾಲಕನೊಬ್ಬ ಅತಿವೇಗವಾಗಿ ಬಂದು ಮಿಲ್ಕ್ ಬೂತ್‌ನ ಎದುರಿಗಿದ್ದ ಹಾಲಿನ ಕ್ರೇಟ್​ಗಳಿಗೆ ಕ್ಷಣಾರ್ಧದಲ್ಲಿ ಡಿಕ್ಕಿ ಹೊಡೆದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಮಿಲ್ಕ್ ಬೂತ್​ನ ಎದುರು ಹತ್ತಾರು ಹಾಲಿನ ಕ್ರೇಟ್​ಗಳನ್ನು ಜೋಡಿಸಿಡಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರನನ್ನು ತಪ್ಪಿಸಲು ಹೋದ ಪಿಕಪ್ ವಾಹನ ಚಾಲಕ, ನಿಯಂತ್ರಣ ತಪ್ಪಿ ನೇರವಾಗಿ ಹಾಲಿನ ಕ್ರೇಟ್​ಗಳಿದ್ದ ಕಡೆ ನುಗ್ಗಿದ್ದಾನೆ. ರಸ್ತೆಯಲ್ಲಿದ್ದ ಹಾಲು ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿಯಾಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಈ ವೇಳೆ ಸೈಕಲ್‌ ಮತ್ತು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದ ಭಯಾನಕ ದೃಶ್ಯ ಸಿಸಿಟಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆದ ಕಾರು: ಬೈಕ್​ ಸವಾರ ಪ್ರಾಣಾಪಾಯದಿಂದ ಪಾರು - ವಿಡಿಯೋ

ಪ್ರತ್ಯೇಕ ಪ್ರಕರಣ: ಅತಿವೇಗದಿಂದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರನಿಗೆ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಅಪಘಾತ ನಡೆಸಿರುವ ಚಾಲಕ ತನ್ನ ಕಾರುಸಹಿತ ಪರಾರಿಯಾಗಿದ್ದಾನೆ. ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.  

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.