ಈಜಲು ಹೋಗಿ ಸ್ನೇಹಿತರ ಎದುರೇ ಪ್ರಾಣ ಬಿಟ್ಟ ಬಾಲಕ - ಈಟಿವಿ ಭಾರತ್ ಕನ್ನಡ ಸುದ್ದಿ

🎬 Watch Now: Feature Video

thumbnail

By

Published : Mar 15, 2023, 8:34 PM IST

Updated : Mar 15, 2023, 10:35 PM IST

ಚಿಕ್ಕಬಳ್ಳಾಪುರ : ಇಶಾ ಪೌಂಡೇಶನ್ ಆದಿಯೋಗಿ ಪ್ರತಿಮೆ ಬಳಿ ಹೋಗಿ ಹಿಂದಿರುಗುವಾಗ ಕಲ್ಲು ಕ್ವಾರಿಯಲ್ಲಿ ಸ್ನೇಹಿತರ ಜೊತೆ ಈಜಾಡಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಕೌರನಹಳ್ಳಿ‌ಯಲ್ಲಿ ನಡೆದಿದೆ. 

ಬೆಂಗಳೂರು ರಾಜಾಜಿನಗರದ ಮನೋಜ್ (17) ಮೃತ ಬಾಲಕ ಎಂದು ತಿಳಿದು ಬಂದಿದೆ. ನಾಲ್ವರು ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಇದ್ದಕ್ಕಿದಂತೆ ಮನೋಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ನೇಹಿತರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸ್ನೇಹಿತರು ಸಹ ಅವನನ್ನು ಕಾಪಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. 

ಬೆಂಗಳೂರಿನಿಂದ ಆಗಮಿಸಿದ್ದ 10 ಮಂದಿ ಬಾಲಕರು ಚಿಕ್ಕಬಳ್ಳಾಪುರಕ್ಕೆ ರೈಲಿನ ಮುಖಾಂತರ ಬಂದು ನಂತರ ಆಟೋದ ಮುಖಾಂತರ ಈಶಾ ಆದಿಯೋಗಿ ವೀಕ್ಷಿಸಿ ವಾಪಸ್ ಬರುವ ವೇಳೆ ಈಜಾಡಲು‌ ಹೋಗಿದ್ದಾರೆ. ಆಗ ಬಾಲಕ ಸಾವನ್ನಪ್ಪಿದ್ದಾನೆ. ನಂತರ‌ ಸ್ಥಳೀಯರ ಸಹಾಯದಿಂದ ಪೊಲೀಸ್ ಇಲಾಖೆ‌ ಹಾಗೂ ಅಗ್ನಿ ಶಾಮಕ‌ದಳದ ಸಿಬ್ಬಂದಿಗೆ ಮಾಹಿತಿ‌ ಮುಟ್ಟಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ತಂದೆ ಸಾವು, ಮನನೊಂದ ಮಗ ಆತ್ಮಹತ್ಯೆಗೆ ಶರಣು.. ಕೌಟುಂಬಿಕ ಕಲಹಕ್ಕೆ ಒಂದೇ ದಿನ ಇಬ್ಬರು ಬಲಿ

Last Updated : Mar 15, 2023, 10:35 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.