12 ಕ್ವಿಂಟಾಲ್ ಹೂವುಗಳಿಂದ ಅಲಂಕೃತಗೊಂಡ ಬದರಿನಾಥ ದೇವಾಲಯ - ಬೆಳಕಿನ ಹಬ್ಬ ದೀಪಾವಳಿ
🎬 Watch Now: Feature Video

ಚಮೋಲಿ(ಉತ್ತರಾಖಂಡ): ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಪವಿತ್ರ ಪುಣ್ಯಕ್ಷೇತ್ರ ಭಗವಾನ್ ಬದರಿನಾಥ ದೇವಾಲಯವನ್ನು 12 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿದೆ. ಇದರಿಂದಾಗಿ ದೇವಸ್ಥಾನದ ಸೌಂದರ್ಯ ಇಮ್ಮಡಿಗೊಂಡಿದೆ. ದೀಪಾವಳಿ ಹಬ್ಬದಂದು ನಾರಾಯಣನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಸದ್ಯಕ್ಕೆ ಧಾಮ್‌ನಲ್ಲಿ ಹವಾಮಾನ ಬದಲಾವಣೆಯಾಗುತ್ತಿದ್ದು, ಚಳಿ ಶುರುವಾಗಿದೆ. ಆದರೂ ಬದರಿನಾಥನ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಭಕ್ತರಲ್ಲಿ ಭಾರಿ ಉತ್ಸಾಹ ಕಂಡು ಬರುತ್ತಿದೆ.
Last Updated : Feb 3, 2023, 8:29 PM IST