ಈ ತಿಂಗಳ 10ರ ಸಂಜೆ 05 ಗಂಟೆಗೆ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ: ಸಚಿವ ಕೆ ಹೆಚ್ ಮುನಿಯಪ್ಪ - KH Muniyappa
🎬 Watch Now: Feature Video
ದೇವನಹಳ್ಳಿ: ಗ್ಯಾರಂಟಿ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡ್ದಾರರಿಗೆ ಹಣ ನೀಡುವ ಹಿನ್ನೆಲೆ ಈ ತಿಂಗಳ 10ರ ಸಂಜೆ 05 ಗಂಟೆಗೆ ಹಣ ಹಾಕುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ದೇವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮ ಭಾಗವಾಗಿ ಮಾತನಾಡಿದ ಅವರು, ಈ ಹಣವನ್ನು ನೇರವಾಗಿ ಅವರವರ ಖಾತೆಗಳಿಗೆ ಹಾಕಲಾಗುತ್ತದೆ. ಬರುವ 15 ದಿನಗಳಲ್ಲಿ ಎಲ್ಲರಿಗೂ ಈ ಹಣವನ್ನು ಹಾಕಲಾಗುತ್ತದೆ. ರಾಜ್ಯದಲ್ಲಿ ಒಟ್ಟು 1 ಕೋಟಿ 29 ಲಕ್ಷ ಬಿಪಿಎಲ್ ಪಡಿತರ ಚೀಟಿಗಳಿವೆ. ಇವುಗಳಿಗೆ ತುಲನೆ ಮಾಡಿದರೆ 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ಹಣ ಬೇಕಾಗುತ್ತದೆ. ತೆಲಂಗಾಣ ಮತ್ತು ಛತ್ತೀಸಗಢ ರಾಜ್ಯಗಳು ನಮಗೆ ಅಕ್ಕಿ ನೀಡಲು ಒಪ್ಪಿಗೆ ಸೂಚಿಸಿವೆ. ಅಲ್ಲದೇ ಈ ಬಗ್ಗೆ ನಮ್ಮ ಸಂಪರ್ಕದಲ್ಲಿಯೂ ಇದ್ದಾರೆ. ಅವರಿಂದ ನಾವು ಅಕ್ಕಿಯನ್ನ ಖರೀದಿ ಮಾಡಿ ಆದಷ್ಟು ಬೇಗ ವಿತರಣೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: Annabhagya Scheme: ನಾಳೆಯಿಂದಲೇ ಅನ್ನಭಾಗ್ಯದ ಹಣ ಫಲಾನುಭವಿಗಳ ಖಾತೆಗೆ ಜಮೆ... ಸಚಿವ ಕೆ ಹೆಚ್ ಮುನಿಯಪ್ಪ