ಕಟ್ಟಿಗೆಯಿಂದ ಹೊಡೆದ ಬೀದಿ ನಾಯಿ ಕೊಲೆ: ಪ್ರಾಣಿಪ್ರಿಯರ ಆಕ್ರೋಶ - ಈಟಿವಿ ಭಾರತ ಕನ್ನಡ
🎬 Watch Now: Feature Video
ಲೂಧಿಯಾನ (ಪಂಜಾಬ್): ಇಲ್ಲಿಯ ಸಾಹ್ನೆವಾಲ್‌ನ ಗಾರ್ಡನ್ ಸಿಟಿ ಪ್ರದೇಶದಲ್ಲಿ ಬೀದಿ ನಾಯಿಯನ್ನು ಹೊಡೆದು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಶ್ವಾನ ಪ್ರೇಮಿಗಳು ಒತ್ತಾಯಿಸಿದ್ದಾರೆ. ಅಲ್ಲದೇ ಪೀಪಲ್ ಫಾರ್ ಅನಿಮಲ್ ಮತ್ತು ಹೆಲ್ಪ್ ಫಾರ್ ಅನಿಮಲ್ ಸಾಮಾಜಿಕ ಸೇವಾ ಸಂಸ್ಥೆ ವಿಡಿಯೋ ಸಮೇತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ವಿಡಿಯೋ ಆಧಾರದ ಮೇಲೆ ಕೃತ್ಯ ಎಸಗಿದವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ನಾಯಿ ಜನರ ಮೇಲೆ ದಾಳಿ ಮಾಡಿ ಕಚ್ಚುತ್ತಿದ್ದ ಕಾರಣ ಅದನ್ನು ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಇನ್ನು ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಶ್ವಾನಪ್ರಿಯರು, ನಾಯಿ ತಮ್ಮ ಮನೆ ಮುಂದೆ ಮಲವಿಸರ್ಜನೆ ಮಾಡಿದೆ ಎಂಬ ಕಾರಣಕ್ಕೆ ಕೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗರ್ಭ ಧರಿಸಿದ ಜಿಪ್ಸಿಗೆ ರಕ್ತ ನೀಡಿದ ಜಿಮ್ಮಿ.. ಪ್ರಾಣಿಪ್ರೇಮ ಮೆರೆದ ಶ್ವಾನದ ಮಾಲೀಕ