ಸತ್ಯಸಾಯಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಚಿರತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/01-12-2023/640-480-20158872-thumbnail-16x9-vny.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 1, 2023, 5:09 PM IST
ಸತ್ಯಸಾಯಿ: ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರ ಎಂಬ ಪಟ್ಟಣದಲ್ಲಿ ನಿನ್ನೆ ಸಂಜೆ ವೇಳೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಆ ಪ್ರದೇಶದ ಜನರು ಭಯಭೀತರಾಗಿದ್ದಾರೆ. ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆ ಕೆಲಕಾಲ ಅಲ್ಲೇ ಕುಳಿತುಕೊಂಡಿದ್ದು, ಬಳಿಕ ಬೇರೊಂದು ಕಡೆಗೆ ತೆರಳಿದೆ.
ಬೆಟ್ಟದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಸ್ಥಳೀಯರೊಬ್ಬರ ಪ್ರಕಾರ, ಚಿರತೆ ಬೆಟ್ಟದಲ್ಲಿ ಬಹಳ ಹೊತ್ತು ತಿರುಗಾಡಿತ್ತು. ಸೂರ್ಯಾಸ್ತದ ವೇಳೆ ಅಲ್ಲಿಂದ ಬೆಟ್ಟದ ಹಿಂಭಾಗಕ್ಕೆ ಹೋಗಿದೆ. ಯಾವ ಕ್ಷಣದಲ್ಲಾದರೂ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಆದ ಕಾರಣ ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಜನ ವಾಸಸ್ಥಳಕ್ಕೆ ಚಿರತೆ ನುಗ್ಗದಂತೆ ತಡೆಯಬೇಕು. ಚಿರತೆಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಅಲ್ಲಿಯ ಸ್ಥಳೀಯರ ಆಗ್ರಹಿಸಿದ್ದಾರೆ. ಚಿರತೆಯ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ಇದನ್ನೂ ಓದಿ: ಮೈಸೂರು: ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಹುಲಿ ಓಡಾಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ