ವಡೋದರಾ ಗರ್ಬಾ ಮಹೋತ್ಸವ : ವಿದೇಶಾಂಗ ಸಚಿವ ಜೈಶಂಕರ್ ಜೊತೆ 60 ವಿದೇಶಿ ರಾಯಭಾರಿಗಳು ಭಾಗಿ - ಈಟಿವಿ ಭಾರತ ಕನ್ನಡ
🎬 Watch Now: Feature Video

ವಡೋದರಾ(ಗುಜರಾತ್): ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 60 ವಿದೇಶಿ ರಾಯಭಾರಿಗಳೊಂದಿಗೆ ವಡೋದರಾದ ಪ್ರಸಿದ್ಧ ಯುನೈಟೆಡ್ ವೇನಲ್ಲಿ ನವರಾತ್ರಿಯನ್ನು ಆಚರಿಸಿದರು. ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಗರ್ಬಾ ಮಹೋತ್ಸವದಲ್ಲಿ ವಿವಿಧ ದೇಶಗಳ ಸುಮಾರು 60 ರಾಯಭಾರಿಗಳು ಭಾಗವಹಿಸಿದ್ದರು. ಗರ್ಬಾ ಮೈದಾನದಲ್ಲಿನ ಮಾತಾಜಿ ಮಂದಿರದಲ್ಲಿ ನಡೆದ ಗರ್ಬಾ ಮಹೋತ್ಸವದಲ್ಲಿ ವಿದೇಶಾಂಗ ಸಚಿವರು ನೃತ್ಯಗಾರರೊಂದಿಗೆ ಪಾಲ್ಗೊಂಡರು. ಶಕ್ತಿಯ ಹಬ್ಬವಾದ ನವರಾತ್ರಿಯಲ್ಲಿ ನೃತ್ಯಗಾರರು ಪೌರಾಣಿಕ ಗಾಯಕ ಅತುಲ್ ಪುರೋಹಿತ್ ಹಾಡಿಗೆ ಮನಸೋತರು.
Last Updated : Feb 3, 2023, 8:28 PM IST