ಹೊಂಡದಲ್ಲಿ ಬಿದ್ದು ನಾಲ್ವರು ಮಕ್ಕಳು ಸಾವು: ತನಿಖೆಗೆ ಆದೇಶ ನೀಡಿದ ಡಿಸಿ - ಜಿಲ್ಲಾ ಮ್ಯಾಜಿಸ್ಟ್ರೇಟ್ ಬಾಲಕೃಷ್ಣ ತ್ರಿಪಾಠಿ
🎬 Watch Now: Feature Video
ಅಮ್ರೋಹಾ (ಉತ್ತರ ಪ್ರದೇಶ): ಜಿಲ್ಲೆಯ ಗಜ್ರೌಲಾ ಪ್ರದೇಶದ ನೌನೇರ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಇಟ್ಟಿಗೆ ಭಟ್ಟಿಗಾಗಿ ನೀರು ತುಂಬಿದ ಚಿಕ್ಕ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ತರಾತುರಿಯಲ್ಲಿ ಮಕ್ಕಳನ್ನು ಚಿಕ್ಕ ಹೊಂಡದಿಂದ ಹೊರತೆಗೆದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಇಟ್ಟಿಗೆ ಗೂಡು ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ಆರೋಪಿಸಿದರು. ಈ ಪಕರಣದ ಕುರಿತು ಡಿಎಂ ತನಿಖೆಗೆ ಆದೇಶ ನೀಡಿದ್ದಾರೆ.
ಪೊಲೀಸರು ಹೇಳಿದ್ದೇನು?: ಪೊಲೀಸರ ಪ್ರಕಾರ, ಗ್ರಾಮದ ಮಾಜಿ ಮುಖ್ಯಸ್ಥನ ಪತಿ ರಜಬ್ ಅಲಿ ಗಜ್ರೌಲಾ ಪ್ರದೇಶದ ನೌನೆರ್ ಗ್ರಾಮದಲ್ಲಿ ಇಟ್ಟಿಗೆ ಗೂಡು ಹೊಂದಿದ್ದಾರೆ. ಬಿಹಾರದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಅವರು ವಾಸಿಸುವ ಸ್ಥಳವೂ ಇಲ್ಲಿದೆ. ಶುಕ್ರವಾರ ಬಿಹಾರದ ಜಮುಯಿ ಜಿಲ್ಲೆಯ ಲಗ್ಮಾ ಗ್ರಾಮದ ರಾಮ್ ಅವರ ಪುತ್ರ ಸೌರಭ್ (4), ಠಾಣಾ ಬರ್ಹತ್‌ನ ಘುಘೋಲ್ಟಿ ಗ್ರಾಮದ ನಿವಾಸಿ ನಾರಾಯಣ ಅವರ ಪುತ್ರಿ ಸೋನಾಲಿ (3), ನಿವಾಸಿ ಅಜಯ್ ಅವರ ಪುತ್ರ ಅಜಿತ್ (2) ಮಥಿಯಾ ಗ್ರಾಮದ ಜಗ್ರು ಎಂಬುವರ ಪುತ್ರಿ ನೇಹಾ(3) ಇಟ್ಟಿಗೆ ಭಟ್ಟಿ ಆವರಣದಲ್ಲಿ ಆಟವಾಡುತ್ತಿದ್ದರು. ಈ ಸಮಯದಲ್ಲಿ, ಅವರು ನೀರು ತುಂಬಿದ ಚಿಕ್ಕಿ ಹೊಂಡದ ಬಳಿಗೆ ಬಂದಿದ್ದಾರೆ.
ಚಿಕ್ಕ ಹೊಂಡದಲ್ಲಿ ಸುಮಾರು ಮೂರೂವರೆ ಅಡಿಯಷ್ಟು ನೀರು ತುಂಬಿತ್ತು. ನಾಲ್ವರು ಮಕ್ಕಳು ಒಂದರ ಹಿಂದೆ ಒಂದರಂತೆ ಈ ಚಿಕ್ಕ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಅಶ್ರಫ್ ತಿಳಿಸಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಅವರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದರು. ಇಟ್ಟಿಗೆ ಭಟ್ಟಿಯ ಮಾಲೀಕನೂ ಬಂದ. ಎಲ್ಲ ಮಕ್ಕಳನ್ನು ಆ ಚಿಕ್ಕ ಹೊಂಡದಿಂದ ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಇಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇಟ್ಟಿಗೆ ಗೂಡು ಮಾಲೀಕರು ಜೆಸಿಬಿ ಮೂಲಕ ಈ ಹೊಂಡಗಳನ್ನು ಮಾಡಿದ್ದರು ಎಂದು ಮೊಹಮ್ಮದ್ ಅಶ್ರಫ್ ತಿಳಿಸಿದರು. ಮಳೆಯಿಂದಾಗಿ ನೀರು ಅವು ಸಂಪೂರ್ಣ ಭರ್ತಿಯಾಗಿವೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಆಗಮಿಸಿದರು. ಇಟ್ಟಿಗೆ ಗೂಡು ನಿರ್ವಾಹಕರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ದೂರಿದ್ದಾರೆ. ಪೊಲೀಸರು ಎಲ್ಲಾ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಾಲಕೃಷ್ಣ ತ್ರಿಪಾಠಿ ಅವರು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ಪ್ರಕರಣ: ಪರಿಸ್ಥಿತಿ ಹತೋಟಿಗೆ ತರಲಾಗಿದೆ - ಭಾರತೀಯ ಸೇನೆ