ಕಾರುಗಳಿದ್ದ 2 ಕ್ಯಾಂಟರ್ ಲಾರಿಗಳಿಗೆ ಬೆಂಕಿ: ವಾಹನಗಳು ಸುಟ್ಟು ಕರಕಲು

By

Published : May 12, 2023, 1:44 PM IST

thumbnail

ಬೆಳಗಾವಿ: ಢಾಬಾವೊಂದರ ಮುಂದೆ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ 10.30 ರ ಸುಮಾರಿಗೆ ಘಟನೆ ನಡೆದಿದ್ದು, ಈ ಬೆಂಕಿ ಅವಘಡ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿಯೇ ಪೆಟ್ರೋಲ್ ಬಂಕ್ ಕೂಡ ಇತ್ತು. 

ಒಂದು ವೇಳೆ ಬೆಂಕಿ ಉರಿಯುತ್ತಿದ್ದ ಜಾಗದಿಂದ ಒಂದು ಸಣ್ಣ ಕಿಡಿ ಪೆಟ್ರೋಲ್​ ಬಂಕ್​ಗೆ ತಾಗಿದ್ದರೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಎರಡೂ ಕ್ಯಾಂಟರ್ ಲಾರಿಗಳು ಮತ್ತು ಅವುಗಳಲ್ಲಿದ್ದ ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ನೋಡಿ: 400 ಅಂಗಡಿಗಳಿದ್ದ ಕಾಂಪ್ಲೆಕ್ಸ್​ನಲ್ಲಿ ಭಾರಿ ಅಗ್ನಿ ಅವಘಡ; ನಾಲ್ವರು ಯುವತಿಯರು ಸೇರಿ 6 ಸಾವು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.