ಎದೆ ಝಲ್​ ಎನಿಸುವ 11 ಅಡಿ ಉದ್ದದ ಕಾಳಿಂಗ ಸರ್ಪ! ನೋಡಿ ವಿಡಿಯೋ

🎬 Watch Now: Feature Video

thumbnail

ಕೊರ್ಬಾ: ಕಾಳಿಂಗ ಸರ್ಪದ ಉದ್ದ ಮತ್ತು ಅದರ ಉಗ್ರತೆ ಕಂಡರೆ ಎಂಥವರಿಗಾದರೂ ಎದೆ ಝಲ್​ ಎನ್ನುತ್ತದೆ. ಇನ್ನು ಅದರ ವಿಷವಂತೂ ಮಾರಣಾಂತಿಕವೇ ಸರಿ. ಇಂತಹ ವಿಷಜಂತು ಛತ್ತೀಸ್​ಗಢದ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು ಜನರು ದಿಕ್ಕಾಪಾಲಾಗಿ ಓಡಿದ್ದರು. ಬಳಿಕ ಉರಗ ರಕ್ಷಕ ಜೀತಂದ್ರ ಸಾರಥಿ ಅವರಿಗೆ ಮಾಹಿತಿ ನೀಡಿದ್ದು, ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಕೊರ್ಬಾ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಜಿಲ್ಲೆಯ ಪಸರಖೇಟ್ ಗ್ರಾಮದ ಬಳಿ 11 ಅಡಿ ಉದ್ದದ ಕೋಬ್ರಾ(ಕಾಳಿಂಗ ಸರ್ಪ) ಕಾಣಿಸಿಕೊಂಡಿದೆ. ಜನರು ಭಯಭೀತರಾಗಿದ್ದರು. ವಿಷಕಾರಿ ಹಾವಿನ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ಅಲ್ಲಿಂದ ದೂರವಿರಿಸಿ ಜಿತೇಂದ್ರ ಸಾರಥಿ ಅವರ ಸಹಾಯದಿಂದ ಕಿಂಗ್ ಕೋಬ್ರಾವನ್ನು ರಕ್ಷಿಸಲಾಗಿದೆ. ಬಳಿಕ ಅದನ್ನು ಗ್ರಾಮದಿಂದ ದೂರವಿರುವ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು. ಬಳಿಕವಷ್ಟೇ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಸ್ಥಳೀಯವಾಗಿ ಕಿಂಗ್​ ಕೋಬ್ರಾವನ್ನು ಪಹರ್ ಚಿಟ್ಟಿ ಎಂದು ಕರೆಯಲಾಗುತ್ತದೆ. ಇದನ್ನು ಇಲ್ಲಿ ಹಾವುಗಳ ರಾಜ ಎಂದೇ ನಂಬಲಾಗಿದೆ. ಇದರ ಉದ್ದ 20 ರಿಂದ 21 ಅಡಿವರೆಗೂ ಇರುತ್ತದೆ. ಈ ಜಾತಿಯು ಬಹಳ ಅಪರೂಪವಾಗಿದೆ. ಇದು ಆಗ್ನೇಯ ಏಷ್ಯಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಇದು ಕಂಡುಬರುತ್ತದೆ. ವಿಶ್ವದ ಅತ್ಯಂತ ವಿಷಕಾರಿ ಮತ್ತು ಉದ್ದವಾದ ಹಾವುಗಳಲ್ಲಿ ಒಂದಾಗಿದೆ. ಈ ಜಾತಿಯ ಹಾವುಗಳು ಕೊರ್ಬಾದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳ ಸಂರಕ್ಷಣೆ ಮಾಡಬೇಕಿದೆ ಎಂದು ಉರಗ ರಕ್ಷಕ ಜೀತೇಂದ್ರ ಸಾರಥಿ ಹೇಳಿದರು.

ಕೊರ್ಬಾ ಅರಣ್ಯವು ಜೀವ ವೈವಿಧ್ಯದಿಂದ ಕೂಡಿದೆ. ಅದನ್ನು ಉಳಿಸುವುದು ಅರಣ್ಯ ಇಲಾಖೆ ಮಾತ್ರವಲ್ಲ, ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿಯೇ ವನ್ಯಜೀವಿಗಳು ಗ್ರಾಮದತ್ತ ಕಂಡುಬಂದಲ್ಲಿ ಮಾಹಿತಿ ನೀಡಿ. ಅವುಗಳನ್ನು ರಕ್ಷಣೆ ಮಾಡಲಾಗುವುದು. ಅವುಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಬೇಡಿ ಎಂದು ಕೊರ್ಬಾ ಅರಣ್ಯ ವಿಭಾಗದ ಡಿಎಫ್​ಒ ಅರವಿಂದ್​ ಜನಸಾಮಾನ್ಯರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.