ಕಾಯುವಿಕೆ ಕೊನೆಗೊಂಡಿದೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ 'ಮ್ಯಾಕ್ಸ್' ಇಂದು ತೆರೆಗಪ್ಪಳಿಸಿದೆ. ಎರಡೂವರೆ ವರ್ಷಗಳ ಬಳಿಕ ಚಂದನವದ ಬಹುಬೇಡಿಕೆ ನಟನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದ್ರೆ ಆರಂಭಿಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಮಿಶ್ರ ಪ್ರತಿಕ್ರಿಯೆ: ಸಿನಿಮಾ ನೋಡಿ ಹೊರಬಂದವರ ರಿಯಾಕ್ಷನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿನಿಮಾ ಸೂಪರ್. ಬ್ಲಾಕ್‌ಬಸ್ಟರ್. ಪರವಾಗಿಲ್ಲ, ನೋಡಬಹುದು. ಚೆನ್ನಾಗಿಲ್ಲ. ಫ್ಲಾಪ್ ಮೂವಿ ಹೀಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಅಭಿಪ್ರಾಯಗಳು ಹೀಗೆ ಮುಂದುವರಿದರೆ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
A movie made for celebration,
— MAX (@Max_themovie) December 25, 2024
Festival begins all over 🔥🔥🥵🥳
Shows are getting filled all over karnataka ,
Hysteria of @KicchaSudeep 👑 have elevated everywhere #MAXimumBlockbuster #MaxTheMovie #MaxRampage pic.twitter.com/SMDPCCLQqb
ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಕಿಚ್ಚ ಸುದೀಪ್ ಸಿನಿಮಾ ತನ್ನ ಮೊದಲ ದಿನ ಭಾರತದಲ್ಲಿ 2.67 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಈ ಅಂಕಿ ಅಂಶ ಏರುವ ಸಾಧ್ಯತೆ ಇದೆ. ವಾರದ ನಡುವೆ ಸಿನಿಮಾ ಬಿಡುಗಡೆ ಆಗಿದ್ದು, ಕ್ರಿಸ್ಮಸ್ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುವ ಭರವಸೆ ಇದೆ. ಸಹಜವಾಗಿ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ ಅಂಕಿ ಅಂಶ ಏರಲಿದ್ದು, ಸದ್ಯ ಪ್ರತಿಕ್ರಿಯೆಗಳು ಪ್ರಮುಖ ಪಾತ್ರ ವಹಿಸಲಿದೆ. ಸುದೀಪ್ ಭಾರತೀಯ ಚಿತ್ರರಂಗದಲ್ಲೇ ಬೇಡಿಕೆ ಹೊಂದಿರುವ ನಟ ಆದ ಹಿನ್ನೆಲೆ, ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆರಂಭಿಕ ವಿಮರ್ಷೆಗಳಲ್ಲಿ ಬಹುತೇಕ ಪ್ರಶಂಸೆಯೇ ಇದೆ.
ಅಭಿನಯ ಚಕ್ರವರ್ತಿ ❌
— DEVIL 👿 (@boss_fan6106) December 25, 2024
ಅಭಿನಯ ಚತ್ರವರ್ತಿ ✅
ಅಜೀಬ್ @KicchaSudeep 😭#MaxTheRemakeMovie pic.twitter.com/NGpxsB2doB
'ಅಭಿನಯ ಚತ್ರವರ್ತಿ'ಗೆ ಟೀಕೆ: ಆರಂಭಲ್ಲೇ ಅಭಿನಯ ಚಕ್ರವರ್ತಿ ಬದಲಿಗೆ ಅಭಿನಯ ಚತ್ರವರ್ತಿ ಎಂಬ ಹೆಸರು ಬಂದಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಥಿಯೇಟರ್ ಸ್ಕ್ರೀನ್ ಫೋಟೋ ವೈರಲ್ ಆಗುತ್ತಿದೆ.
Just watched #MaxTheMovie – a superb action thriller that delivers non-stop excitement with the perfect mix of emotions.
— Nirup Bhandari (@nirupbhandari) December 25, 2024
Absolutely loved @KicchaSudeep sir’s unmatched style and charisma.
Kudos to the entire team on this fantastic effort! @vijaykartikeyaa @AJANEESHB… pic.twitter.com/3fFnTctAo9
ರಿಯಾಕ್ಷನ್ಸ್ ಹೇಗಿದೆ? ನಿರೂಪ್ ಭಂಡಾರಿ ಟ್ವೀಟ್ ಮಾಡಿ, ಮ್ಯಾಕ್ಸ್ ಸಿನಿಮಾವನ್ನು ಈಗಷ್ಟೇ ವೀಕ್ಷಿಸಿದೆ. ಸೂಪರ್ಬ್ ಆ್ಯಕ್ಷನ್ ಥ್ರಿಲ್ಲರ್. ಭಾವನೆಗಳ ಪರಿಪೂರ್ಣ ಮಿಶ್ರಣದೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡಿದೆ. ಸಿನಿಮಾ ಬಹಳ ಇಷ್ಟವಾಯಿತು. ಕಿಚ್ಚ ಸುದೀಪ್ ಸರ್ ಅವರ ಅಪ್ರತಿಮ ಸ್ಟೈಲ್ ಮತ್ತು ವರ್ಚಸ್ಸು ಎದ್ದು ಕಾಣುತ್ತಿದೆ. ಈ ಅದ್ಭುತ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಪ್ರಶಂಸಿಸಿದ್ದಾರೆ.
#MaxTheMovie: Gripping tale with the perfect amount of twists and turns made this film a blockbuster. Thank you @vijaykartikeyaa, for achieving what others couldn’t for my man.
— Akash R Patil (@ImAkashPatil) December 25, 2024
Kiccha was at his best,, what an incredible actor you are anna., absolute fire on screen.#MaxRampage pic.twitter.com/ZGNkzgJeZH
ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು ಟ್ವೀಟ್ ಮಾಡಿ, ಪರಿಪೂರ್ಣ ಪ್ರಮಾಣದ ಟ್ವಿಸ್ಟ್ ಆ್ಯಂಡ್ ಟರ್ನ್ಸ್ನೊಂದಿಗೆ ಬಂದಿರುವ ಗಟ್ಟಿ ಕಥೆಯು ಈ ಚಿತ್ರವನ್ನು ಬ್ಲಾಕ್‌ಬಸ್ಟರ್ ಮಾಡಲಿದೆ. ಧನ್ಯವಾದಗಳು. ವಿಜಯ್ ಕಾರ್ತಿಕೇಯ ಅವರ ನಿರ್ದೇಶನ ಅದ್ಭುತ. ಕಿಚ್ಚ ಬೆಸ್ಟ್. ನೀವೆಂಥಾ ಅದ್ಭುತ ನಟ ಅಣ್ಣಾ, ತೆರೆ ಮೇಲೆ ಕಿಚ್ಚು ಹಚ್ಚಿದ್ದೀರಿ ಎಂದು ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ: 'ಆ ಸೀನ್ ಕಂಫರ್ಟ್ ಅನಿಸಲಿಲ್ಲ': ರಶ್ಮಿಕಾ ಮಂದಣ್ಣಗೆ ಕಷ್ಟವಾದ ಸೀನ್ ಇದು; ಫೋಬಿಯಾ ಬಗ್ಗೆಯೂ ಬಂತು ಮಾತು
Words are not enough to describe what this Success means to Us ❤️ As a Fan We waited for this performance from long time and finally the day came 💥
— Kiccha Sudeep Trends™ (@TheSudeepTrends) December 25, 2024
Let's Celebrate the Success of @Max_themovie by using Below Tag 🔥🔥
Tag - #MAXimumBlockbuster@KicchaSudeep #MaxTheMovie pic.twitter.com/m2lKw4bGBB
ಅಭಿಮಾನಿಗಳು ಟ್ವೀಟ್ ಮಾಡಿ, ಈ ಯಶಸ್ಸಿನನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ಅಭಿಮಾನಿಯಾಗಿ ನಾವು ಈ ಪ್ರದರ್ಶನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಅಂತಿಮವಾಗಿ ಈ ದಿನ ಬಂದಿದೆ. ಯಶಸ್ಸನ್ನು ಆಚರಿಸೋಣ ಎಂದು ಖುಷಿ ಹಂಚಿಕೊಂಡಿದ್ದಾರೆ.
Kollegal Fans FEEDHA @KicchaSudeep ಏನ್ ಗುರು ನಿನ್ ಆಕ್ಟಿಂಗು ನಿನಗೆ ನೀನೇ ಸರಿ ಸಾಟಿ 🥵💥❤️🔥❤️🔥 Base Voice,Dance,Fight 💥
— KOLLEGAL KICCHA FC™ (@KKSSS_official) December 25, 2024
BOSS OF MASS 🥵@AJANEESHB 🙏🏻🙏🏻🥵❤️🔥💥 Hat's Off To Ur BGM every Sean Just Doom doom doom Doom 🔥🚒💯🥵 #MAXimumBlockbuster #MaxRampage
#MaxTheMovie #KicchaSudeep pic.twitter.com/OXrH4CRkJh
ಇದನ್ನೂ ಓದಿ: ಶಿವರಾಜ್ಕುಮಾರ್ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಸೆಲೆಬ್ರೇಷನ್ ವಿಡಿಯೋ ಹಂಚಿಕೊಂಡ ಅಭಿಮಾನಿಗಳು, ''ಕಿಚ್ಚ ಸುದೀಪ್, ಏನ್ ಗುರು ನಿನ್ ಆ್ಯಕ್ಟಿಂಗು, ನಿನಗೆ ನೀನೇ ಸರಿ ಸಾಟಿ. ಬೇಸ್ ವಾಯ್ಸ್, ಡ್ಯಾನ್ಸ್, ಫೈಟ್ ಅತ್ಯುತ್ತಮ, ಬಾಸ್ ಆಫ್ ಮಾಸ್. ಅಜನೀಶ್, ಹ್ಯಾಟ್ಸ್ ಆಫ್ ಟು ಯುವರ್ ಬಿಜಿಎಂ, ಎಲ್ಲಾ ಸೀನ್ಗಳು ದೂಮ್, ದೂಮ್, ದೂಮ್'' ಎಂದು ಹೊಗಳಿದ್ದಾರೆ.