ಬೆಂಗಳೂರಿನಲ್ಲಿ ಲಖನೌ ತಂಡದ ಕ್ಯಾಪ್ಟನ್ ಕೆ.ಎಲ್.ರಾಹುಲ್: ಆರ್ಸಿಬಿ ಬಗ್ಗೆ ಹೇಳಿದ್ದೇನು? - ಲಖನೌ ತಂಡದ ಬಗ್ಗೆ ರಾಹುಲ್ ಮಾತು
🎬 Watch Now: Feature Video
ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಆರಂಭವಾಗಲಿದೆ. ಈ ಸಲ 10 ತಂಡಗಳು ಸೆಣಸಾಟ ನಡೆಸಲಿವೆ. ಹೊಸದಾಗಿ ಸೇರಿಕೊಂಡಿರುವ ಲಖನೌ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಕ್ಯಾಪ್ಟನ್ ಆಗಿದ್ದಾರೆ. ಸದ್ಯ ಬೆಂಗಳೂರಿನ ತರಬೇತಿ ಪಡೆದುಕೊಳ್ಳುತ್ತಿರುವ ರಾಹುಲ್ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ. ತಂಡಕ್ಕೆ ಬೇಕಾದ ಅವಶ್ಯಕ ಪ್ಲೇಯರ್ಸ್ ಖರೀದಿಸಿದ್ದೇವೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆ ಇದೆ. ನನ್ನ ಮನೆ ಬೆಂಗಳೂರಿನಲ್ಲಿದೆ. ನನ್ನ ಹೃದಯ ಯಾವಾಗಲೂ ಇಲ್ಲೇ ಇರುತ್ತದೆ. ಬೆಂಗಳೂರಿಗರು ಹಾಗೂ ಕರ್ನಾಟಕ ಯಾವಾಗಲೂ ನನಗೆ ಹಾಗೂ ನನ್ನ ತಂಡಕ್ಕೆ ಸಪೋರ್ಟ್ ಮಾಡ್ತಾರೆ ಎಂದರು.
Last Updated : Feb 3, 2023, 8:19 PM IST