thumbnail

By

Published : Jan 31, 2020, 3:43 PM IST

ETV Bharat / Videos

ಸ್ಕೀ ರೆಸಾರ್ಟ್​ಗೆ ಅಪ್ಪಳಿಸಿದ ಹಿಮಪಾತ... ಭರದಿಂದ ಸಾಗಿದ ಕಾರ್ಯಾಚರಣೆ!

ಎಂಟು ವಿದೇಶಿಗರಿದ್ದ ಸ್ಕೀ ರೆಸಾರ್ಟ್​ಗೆ ಹಿಮಪಾತ ಅಪ್ಪಳಿಸಿರುವ ಘಟನೆ ಜಪಾನಿನ ಹೊಕ್ಕೈಡೋ ದ್ವೀಪದಲ್ಲಿ ನಡೆದಿದೆ. ಗುರುವಾರ ಶಿಮುಕಪ್ಪು ಗ್ರಾಮದ ಸಮೀಪ ತೋಮಮು ಸ್ಕೀ ರೆಸಾರ್ಟ್ ಬಳಿ ವಿದೇಶಿಗರು ಸ್ಕೀಯಿಂಗ್​ ಆಟವಾಡುತ್ತಿರುವಾಗ ಹಿಮಪಾತವಾಗಿದೆ. ಎಂಟು ಜನರಲ್ಲಿ ಒಬ್ಬ ಹಿಮಪಾತದಿಂದ ತಪ್ಪಿಸಿಕೊಂಡು ಪೊಲೀಸರಿಗೆ ಸಹಾಯಕ್ಕಾಗಿ ಫೋನ್​ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರು ಜನರನ್ನು ರಕ್ಷಿಸಿದರು. ಆದ್ರೆ ಈ ಘಟನೆಯಲ್ಲಿ ಓರ್ವ ವಿದೇಶಿಗ ಸಾವನ್ನಪ್ಪಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.