'ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ': ನಟ ದತ್ತಣ್ಣ ಸೇರಿ ಸೆಲೆಬ್ರಿಟಿಗಳಿಂದ ಮನವಿ - actor dattanna
🎬 Watch Now: Feature Video
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ರಂಗು ಜೋರಾಗಿದೆ. ಮೇ. 10ರಂದು ಮತದಾನ ನಡೆಯಲಿದ್ದು, ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಸೆಲೆಬ್ರಿಟಿಗಳು ಸಹ ಪ್ರಚಾರಕ್ಕೆ ಫೀಲ್ಡಿಗಿಳಿದಿದ್ದಾರೆ. 'ಈಟಿವಿ ಭಾರತ'ದ ಜೊತೆ ಮಾತನಾಡಿದ ಸೆಲೆಬ್ರಿಟಿಗಳು ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಟ ಕೋಮಲ್: ಇದೇ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ. ಇದು ನಿಮ್ಮ ಹಕ್ಕು. ಯಾವುದೇ ಕಾರಣ ಕೊಡದೇ, ದೇಶ-ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ ಚಲಾಯಿಸಿ ಎಂದು ನಟ ಕೋಮಲ್ ಮನವಿ ಮಾಡಿದ್ದಾರೆ.
ನಟ ದತ್ತಣ್ಣ: ದಯವಿಟ್ಟು ಎಲ್ಲರೂ ನಿಮ್ಮ ಅಮೂಲ್ಯ ಮತ ಚಲಾಯಿಸಿ. ಹಿಂದಿನ ದಿನಗಳಲ್ಲಿ ಕೆಲವೆಡೆ ತೀರಾ ಕಡಿಮೆ ಸಂಖ್ಯೆಯಲ್ಲಿ ಮತಗಳು ಚಲಾವನೆ ಅಗಿದೆ. ಅದು ಬಹಳ ಅನ್ಯಾಯ, ಹಾಗಾಗಬಾರದು. ನಮ್ಮ ಮತಗಳಿಗೆ ಒಂದು ಬೆಲೆ ಬರಬೇಕಂದ್ರೆ, ಎಲ್ಲರೂ ಮತಚಲಾಯಿಸಬೇಕಿದೆ. ದಯವಿಟ್ಟು ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ ಎಂದು ಹಿರಿಯ ನಟ ದತ್ತಣ್ಣ ಕೇಳಿಕೊಂಡರು.
ಅಜನೀಶ್ ಲೋಕನಾಥ್: ಪ್ರತಿಯೊಬ್ಬರೂ ಮತ ಚಲಾಯಿಸಿ. ಮತ ಹಾಕುವುದರ ಮೂಲಕ ನಮ್ಮ ದೇಶದ ಬೆಳವಣಿಗೆಗೆ ನಾವು ಕೊಡುಗೆ ನೀಡಬೇಕು ಎಂದು ಸಂಗೀತ ನಿರ್ದೇಶಕ ಅಶನೀಶ್ ಲೋಕನಾಥ್ ಮನವಿ ಮಾಡಿಕೊಂಡರು.
ಇದನ್ನೂ ಓದಿ: ನಾವು ಕೂಡ ವೋಟ್ ಮಾಡುತ್ತೇವೆ, ನೀವು ಕೂಡ ತಪ್ಪದೇ ವೋಟ್ ಮಾಡಿ: ಸೆಲೆಬ್ರಿಟಿ, ವಿಐಪಿಗಳ ಮನವಿ