ಡಿವೈನ್ ಸ್ಟಾರ್ ಕೈಹಿಡಿದ ಪಂಜುರ್ಲಿ ದೈವ: ಕಾಂತಾರ 2 ನಿರ್ಮಾಣಕ್ಕೆ ಅಭಯ - Panjurli video
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18378213-thumbnail-16x9-news.jpg)
ಬಂಟ್ವಾಳ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುತ್ತೂರಿನಲ್ಲಿ ಇತ್ತೀಚೆಗೆ ನಡೆದ "ನಟ್ಟಿಲ್ ಪಂಜುರ್ಲಿ ದೈವದ ನೇಮೋತ್ಸವ''ದಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಈ ಸಂದರ್ಭ ಕಾಂತಾರ 2 ಚಲನಚಿತ್ರ ನಿರ್ಮಾಣಕ್ಕೆ ದೈವ ಅಭಯ ನೀಡಿದೆ.
ಕಾಂತಾರ ಚಿತ್ರದ ಮತ್ತೊಂದು ಭಾಗ (ಕಾಂತಾರ 1)ದ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆ ಪಂಜುರ್ಲಿ ದೈವದ ನೇಮದಲ್ಲಿ ಅಭಯ ಪಡೆದಿದ್ದಾರೆ. ಮುಂದಿನ ಸಿನಿಮಾವನ್ನು ಮಾಡಲು ದೈವ ಆಶೀರ್ವದಿಸಿದೆ ಎಂಬ ಮಾಹಿತಿ ಇದೆ. ಈ ಹಿಂದೆ ಕಾಂತಾರ ಮಾಡುವ ವೇಳೆಯೂ ರಿಷಬ್ ಅವರು ಪಂಜುರ್ಲಿ ದೈವದ ಅಭಯ ಪಡೆದಿದ್ದರು. ದೈವ ನರ್ತಕ ಮುಖೇಶ್ ಬಂದಲೆ ಅವರು ಕಾಂತಾರ ಚಿತ್ರತಂಡದ ಹಿಂದೆ ನಿಂತು ಸಹಕರಿಸಿದ್ದರು. ಮುಖೇಶ್ ಅವರ ಡೈರೆಕ್ಷನ್ ಕೂಡ ಇತ್ತು. ಇತ್ತೀಚೆಗೆ ನಡೆದ ಮುಖೇಶ್ ಅವರ ನಟ್ಟಿಲ್ ಪಂಜುರ್ಲಿ ದೈವದ ನೇಮಕ್ಕೆ ರಿಷಬ್ ಶೆಟ್ಟಿ ಬಂದಿದ್ದರು.
ಇದನ್ನೂ ಓದಿ: 'ದೇವಲೋಕದ ಜೋಡಿ': ಅಭಿಮಾನಿಗಳ ಮನಗೆದ್ದ 'ಸಿಂಹಪ್ರಿಯಾ' ಫೋಟೋಗಳು
ಪಂಜುರ್ಲಿ ಗಗ್ಗರ ಸೇವೆಯ ವೇಳೆ ರಿಷಬ್ ಶೆಟ್ಟಿ ಅಲ್ಲದೇ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಅವರ ಕೈ ಹಿಡಿದು ದೈವ ಅಭಯ ನೀಡಿರುವ ವಿಡಿಯೋ ಭಾರಿ ಸದ್ದು ಮಾಡಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ, ಸುಬ್ರಾಯ ಮಾರ್ಲ, ಕೃಷ್ಣರಾಜ್ ಮಾರ್ಲ, ಪವನ್ ಕುಮಾರ್ ಶೆಟ್ಟಿ, ರಿತೇಶ್ ಮಾರ್ಲ, ಮತ್ತಿತರರು ಉಪಸ್ಥಿತರಿದ್ದರು.