ನನ್ನ 40% ಕಮೀಷನ್ ಸಿದ್ದೇಶಿ ಅಂತ ಹೇಳ್ತಾರೆ: ಸಂಸದ ಜಿ ಎಂ ಸಿದ್ದೇಶ್ವರ್ - etv bharat karanataka
🎬 Watch Now: Feature Video
ದಾವಣಗೆರೆ: ನನ್ನ 40% ಕಮೀಷನ್ ಸಿದ್ದೇಶಿ ಅಂತ ಹೇಳುತ್ತಾರೆ, 40% ಅಲ್ಲ 0.4% ಕಮೀಷನ್ ತಗೊಂಡಿದೀನಿ ಎಂದು ಸಾಬೀತುಪಡಿಸಲಿ. ನಾನು ರಾಜೀನಾಮೆ ನೀಡುವೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ರೀತಿಯಾದಂತಹ ಆರೋಪಗಳನ್ನ ಸರ್ಕಾರದ ಮೇಲೆ, ನಮ್ಮ ಮುಖಂಡರ ಮೇಲೆ ಹೊರಿಸುತ್ತಿದ್ದಾರೆ. ಬಹುಶಃ ಕಾಂಗ್ರೆಸ್ ನವರು ಆರೋಪ ಹೊರಿಸೆ ಅಧಿಕಾರ ಆಳಿರುವುದು ಎಂದು ಕಿಡಿಕಾರಿದರು.
ಇನ್ನು ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕಾಗಿದೆ. ಬೂತ್ ಮಟ್ಟದಿಂದ ಬಿಜೆಪಿಗೆ ಮತ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಂಸದರು ಕರೆ ನೀಡಿದರು.
Last Updated : Feb 3, 2023, 8:39 PM IST