ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ನಟ ಕುಮಾರ್ ಗೋವಿಂದ್! - actress Leelavathi
🎬 Watch Now: Feature Video


Published : Dec 9, 2023, 11:59 AM IST
|Updated : Dec 9, 2023, 2:12 PM IST
ಬೆಂಗಳೂರು: ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲು ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ.
ಓದಿ: 200 ಮಂದಿ ಜೂನಿಯರ್ ನಟರಿಗೆ ನೆರವಾದ್ರು ಹಿರಿಯ ನಟಿ ಡಾ.ಲೀಲಾವತಿ
ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಟ ಕುಮಾರ್ ಗೋವಿಂದ್ ಮಾತನಾಡಿ, ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ. ಅಮ್ಮ ಬಹು ಸಮಯಗಳಿಂದ ಪರಿಚಿತರು. ನಾನು ಮತ್ತು ವಿನೋದ್ ಸಿನಿಮಾಗಳನ್ನು ಮಾಡುವಾಗ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ನೆಲಮಂಗಲದಲ್ಲಿ ತೋಟ ಖರೀದಿಸಿದ ಬಳಿಕ ಅಮ್ಮನವರ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಿದ್ದೆ. ನನ್ನ ಜಾಗದಲ್ಲಿ ಅವರು ತಮ್ಮ ಕೈಯಿಂದ ಭತ್ತ ಹಾಕಿ ಆಶೀರ್ವದಿಸಿದ್ದರು. ಅವೆಲ್ಲವೂ ಹೃದಯ ತಟ್ಟಿದ ನೆನಪುಗಳೆಂದು ಹೇಳಿ ಭಾವುಕರಾದರು.
ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಪಾರ್ಥಿವ ಶರೀರ: ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಅಭಿಮಾನಿಗಳು
ಪರಿಸರ, ಪ್ರಾಣಿ - ಪಕ್ಷಿಗಳ ಮೇಲೆ ಅತಿಯಾದ ಒಲವು ಹೊಂದಿದ್ದರು. ಪ್ರಾಣಿಗಳನ್ನು ಮಕ್ಕಳಂತೆ ನೋಡುತ್ತಿದ್ದರು. ಆ ಪ್ರಾಣಿಗಳೂ ಈಗ ಕಣ್ಣೀರಿಡುತ್ತಿವೆ. ಅವರ ಜೀವನ ನಮಗೆಲ್ಲರಿಗೂ ಆದರ್ಶ. ಅವರ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ತಿಳಿಸಿ ಭಾವುಕರಾದರು.
ಇದನ್ನು ಓದಿ: ಶ್ರವಣಕುಮಾರನಂತೆ ತಾಯಿಯ ಸೇವೆ ಮಾಡುತ್ತಿರುವ ವಿನೋದ್ ರಾಜ್