ಅಮ್ನೆಸ್ಟಿ ಕಾಯ್ದೆ ಜಾರಿಗೆ ಮುಂದಾದ ಕೇಂದ್ರ ಸರ್ಕಾರದ ನಡೆಗೆ ಟಿ.ಎ ಶರವಣ ವಿರೋಧ - sharavana opposed Amnesty act
🎬 Watch Now: Feature Video

ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಅಮ್ನೆಸ್ಟಿ ಕಾಯ್ದೆಗೆ ಎಂಎಲ್ಸಿ ಹಾಗೂ ಕರ್ನಾಟಕ ಜ್ಯೂವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ ಶರವಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದೊಂದು ಕರಾಳ ಶಾಸನ. ತುಘಲಕ್ ದರ್ಬಾರ್ ಎನಿಸುತ್ತದೆ. ಧನದ ರೂಪದಲ್ಲಿ ಬಂಗಾರವನ್ನು ಸಂಗ್ರಹಿಸುವುದು ನಮ್ಮ ಸಂಪ್ರದಾಯ. ಆದರೆ ಅದಕ್ಕೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ನೀಡಲು ಹೊರಟಿದೆ ಎಂದು ದೂರಿದರು.