'ನಾ ಸಾ ರಾ ಮಹೇಶ್ ಅಲ್ಲ, ಕೊಳ್ಳೇಗಾಲ ಮಹೇಶ್..' ಮೈಸೂರು ಡಿಸಿ ಜತೆಗಿನ ಹಾಸ್ಯ ಪ್ರಸಂಗ.. - ಶಾಸಕ ಮಹೇಶ್ ರೋಹಿಣಿ ಸಿಂಧೂರಿ ಪೋನ್ ಸಂಭಾವಣೆ
🎬 Watch Now: Feature Video
ಚಾಮರಾಜನಗರ : ಬರೋಬ್ಬರಿ 11 ತಿಂಗಳ ಬಳಿಕ ನಡೆದ ಕೆಡಿಪಿ ಸಭೆಯಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹಂಚಿಕೊಂಡ ವಿಚಾರವೊಂದು ಕೆಲ ಹೊತ್ತು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಎಷ್ಟೇ ಕರೆ ಮಾಡಿದ್ರೂ ಕರೆ ಸ್ವೀಕರಿಸಲಿಲ್ಲವಂತೆ. ಕೊನೆಗೆ, ನಾನು ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಸಾ ರಾ ಮಹೇಶ್ ಅಲ್ಲ ಎಂದು ಮೆಸೇಜ್ ಮಾಡಿದ ಕೂಡಲೇ ರಿಟರ್ನ್ ಕಾಲ್ ಬಂದಿತು ಅಂತಾ ಈ ವಿಚಾರ ಹಂಚಿಕೊಂಡ ಕೂಡಲೇ ಸಭೆ ನಗೆಗಡಲಿನಲ್ಲಿ ತೇಲಿತು. ಮಹೇಶ್ ಅವರ ಮಾತು ಮುಗಿಯುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಹನೂರು ಶಾಸಕ ಕಾಂಟ್ಯಾಕ್ಟ್ ಸ್ಪೆಲ್ಲಿಂಗ್ ಒಂದೇ ರೀತಿ ಇದ್ದಿದ್ದರಿಂದ ಹಾಗಾಯ್ತೇನೋ ಎಂದು ಮತ್ತೊಂದು ನಗೆ ಚಟಾಕಿ ಹಾರಿಸಿದರು. ಮೈಸೂರು ಡಿಸಿ ಹಾಗೂ ಶಾಸಕ ಸಾ.ರಾ.ಮಹೇಶ್ ಅವರ ಮುಸುಕಿನ ಗುದ್ದಾಟದ ರೋಚಕದಂತೆ ಮಹೇಶ್ ಅವರ ಮೆಸೇಜ್ ಪ್ರಸಂಗ ಸೊಗಸಾಗಿತ್ತು.
Last Updated : Jan 25, 2021, 10:22 PM IST