ಜಿಎಸ್ಟಿ ಜಾರಿಗೆ ಅರುಣ್ ಜೇಟ್ಲಿ ಅವರದ್ದು ಭಗೀರಥ ಶ್ರಮ: ಆರ್ಥಿಕ ವಿಶ್ಲೇಷಕ ನಿತ್ಯಾನಂದ
🎬 Watch Now: Feature Video
ಬೆಂಗಳೂರು: ಅರುಣ್ ಜೇಟ್ಲಿ ಅವರದ್ದು ಸಜ್ಜನ ಹಾಗೂ ಸರಳ ವ್ಯಕ್ತಿತ್ವ. ಜಿಎಸ್ಟಿ ಜಾರಿಯಲ್ಲಿ ಭಗೀರಥನಂತೆ ಶ್ರಮವಹಿಸಿದ್ದರ ಫಲವಾಗಿ ಇಂದು ದೇಶಾದ್ಯಂತ ಏಕೀಕೃತ ತೆರಿಗೆ ಪದ್ಧತಿ ಜಾರಿಯಾಗಿದೆ. ಎಲ್ಲ ರಾಜ್ಯಗಳ ಹಣಕಾಸು ಸಚಿವರು ಮತ್ತು ಮುಖ್ಯಮಂತ್ರಿಗಳ ಸಮಿತಿಯನ್ನು ಕಟ್ಟಿಕೊಂಡು ದಶಕದಿಂದ ನನೆಗುದ್ದಿಗೆ ಬಿದ್ದಿದ್ದ ಜಿಎಸ್ಟಿ ಅನುಷ್ಠಾನಕ್ಕೆ ತಂದರು ಎಂದು ಆರ್ಥಿಕ ವಿಶ್ಲೇಷಕ ನಿತ್ಯಾನಂದ ಸ್ಮರಿಸಿದರು.